ಮೈಸೂರು, March.26,2026: ಮಾನವೀಯತೆ, ಕರ್ತವ್ಯನಿಷ್ಠೆ ಮತ್ತು ವೃತ್ತಿ ಬದ್ಧತೆಯ ಅಪರೂಪದ ಉದಾಹರಣೆಯಾಗಿ ಜಿಲ್ಲೆಯ ಸರಕಾರಿ ಪ್ರೌಢಶಾಲೆ ಜಿ.ಬಿ. ಸರಗೂರಿನ ಪ್ರಭಾರ ಮುಖ್ಯ ಶಿಕ್ಷಕಿ ಜ್ಯೋತಿ ಅವರು ಹೊರಹೊಮ್ಮಿದ್ದಾರೆ.
ಜ್ಯೋತಿ ಅವರ ಪತಿ ಕಿರಣ್ ಕುಮಾರ್ (47) ಅವರು ಮಾರ್ಚ್ 25, 2026ರಂದು ನಿಧನರಾಗಿದ್ದಾರೆ. ಕುಟುಂಬದ ಮೇಲೆ ದುಃಖದ ನೆರಳು ಆವರಿಸಿರುವ ಈ ಸಂಕಷ್ಟದ ಸಮಯದಲ್ಲಿಯೇ, ತಮ್ಮ ವೈಯಕ್ತಿಕ ನೋವನ್ನು ಮರೆತು, ವಿದ್ಯಾರ್ಥಿಗಳ ಭವಿಷ್ಯವೇ ಮುಖ್ಯವೆಂದು ಅವರು ತೋರಿದ ದೃಢತೆ ಗಮನಾರ್ಹವಾಗಿದೆ.

ಮಾರ್ಚ್ 28ರಂದು ನಡೆಯಲಿರುವ ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು, ಪತಿಯ ಮರಣದ ಮರು ದಿನವೇ ಶಾಲೆಗೆ ಹಾಜರಾಗಿ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತೆ ನಡೆಸುತ್ತಿರುವುದು ಅವರ ಅಸಾಮಾನ್ಯ ಸಮರ್ಪಣೆಯನ್ನು ತೋರಿಸುತ್ತದೆ. ಗಣಿತ ಶಿಕ್ಷಕಿಯಾಗಿರುವ ಜ್ಯೋತಿ ಅವರು, “ಪ್ರತಿ ವಿದ್ಯಾರ್ಥಿಯೂ ತೇರ್ಗಡೆಯಾಗಬೇಕು” ಎಂಬ ದೃಢ ಸಂಕಲ್ಪದೊಂದಿಗೆ ತರಗತಿಯಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ.
ಅವರ ಈ ಕಾರ್ಯಕ್ಕೆ ಪೋಷಕರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಹಾಗೂ ಸಹೋದ್ಯೋಗಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದುಃಖದ ನಡುವೆಯೂ ಕರ್ತವ್ಯಕ್ಕೆ ಆದ್ಯತೆ ನೀಡಿದ ಜ್ಯೋತಿ ಅವರ ನಿಷ್ಠೆ, ಸಮಾಜಕ್ಕೆ ಪ್ರೇರಣೆಯಾಗಿ ಪರಿಣಮಿಸಿದೆ ಎಂದು ಎಚ್.ಡಿ.ಕೋಟೆ ತಾಲೋಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಎನ್. ರಾಜು ಪ್ರಶಂಸಿಸಿದ್ದಾರೆ.

“ಶಿಕ್ಷಕತ್ವವೆಂದರೆ ಕೇವಲ ವೃತ್ತಿಯಲ್ಲ, ಅದು ಒಂದು ಹೊಣೆಗಾರಿಕೆ” ಎಂಬುದನ್ನು ಜ್ಯೋತಿ ಅವರು ತಮ್ಮ ನಡೆ-ನುಡಿಗಳ ಮೂಲಕ ಸಾಬೀತುಪಡಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Key words: Teacher’s Dedication, Amid Personal Loss, Wins Hearts, Saraguru, dedication, Jyothi, in-charge headmistress,

SUMMARY:
Teacher’s Dedication Amid Personal Loss Wins Hearts
Saraguru: In a remarkable act of dedication, Jyothi, in-charge headmistress of Government High School, continued her duty despite a personal tragedy.
Her husband, Kiran Kumar (47), passed away on March 25, 2026. Yet, with SSLC Maths exam scheduled on March 28, she returned to school the very next day to guide students. A Maths teacher, Jyothi prioritized her students’ future over her grief, ensuring they are well-prepared to pass. Her commitment has earned widespread praise from parents, students, alumni, and the community, who hail her as a true example of duty and humanity.

Her efforts have drawn widespread appreciation from parents, students, alumni, and colleagues. Despite her personal grief, Jyothi’s decision to prioritize her duty has become an inspiration to society, said H.D. Kote Taluk Block Education Officer S.N. Raju.
He further praised her, stating that Jyothi has proved through her actions that “teaching is not just a profession, but a responsibility.”








