ಪಿಎಸ್ ಐ ನೇಮಕಾತಿ ಅಕ್ರಮ ಬೆನ್ನಲ್ಲೆ ಎಚ್ಚೆತ್ತ ಸರ್ಕಾರ: ಬಿಗಿ ಭದ್ರತಾ ಕ್ರಮಗಳೊಂದಿಗೆ ಶಿಕ್ಷಕರ ನೇಮಕಾತಿ ಪರೀಕ್ಷೆ  ನಡೆಸಲು ಸಜ್ಜು.

ಬೆಂಗಳೂರು,ಮೇ,10,2022(www.justkannada.in):  ರಾಜ್ಯದಲ್ಲಿ ಪಿಎಸ್ ಐ ನೇಮಕಾತಿ ಅಕ್ರಮ ಹಗರಣ ಬೆಳಕಿಗೆ ಬಂದ ಬೆನ್ನಲ್ಲೆ ಇದೀಗ ಎಚ್ಚೆತ್ತಿರುವ ರಾಜ್ಯ ಸರ್ಕಾರ ಮೇ 21 ಮತ್ತು 22 ರಂದು ನಡೆಯುವ 15 ಸಾವಿರ ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನ ಬಿಗಿ ಭದ್ರತಾ ಕ್ರಮಗಳೊಂದಿಗೆ ನಡೆಸಲು ಸಜ್ಜಾಗಿದೆ.

ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್,  ಮೇ 21, 22ರಂದು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆಯಲಿದೆ. ರಾಜ್ಯದ 435 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ನಡೆಯಲಿದ್ದು,  ಪರೀಕ್ಷೆಗೆ ಸೂಕ್ತ ಕ್ರಮಗಳ ಬಗ್ಗೆ ಗೃಹ ಇಲಾಖೆ ಜೊತೆ ಚರ್ಚಿಸಿದ್ದೇವೆ. ಪರೀಕ್ಷಾ ಕೇಂದ್ರದೊಳಗೆ ಎಲೆಕ್ಟ್ರಾನಿಕ್ ವಸ್ತು ತೆಗೆದುಕೊಂಡು ಹೋಗುವಂತಿಲ್ಲ. ಮೊಬೈಲ್, ವಾಚ್, ಎಲೆಕ್ಟ್ರಾನಿಕ್ ಡಿವೈಸ್ ಗೆ ಅವಕಾಶ ಇರಲ್ಲ. ಪ್ರಶ್ನೆಪತ್ರಿಕೆ ಗೌಪ್ಯತೆ, ಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ.

ಪ್ರತಿ ಕೇಂದ್ರದಲ್ಲಿ 20 ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಕ್ಯಾಮರಾ  ಮೆಟಲ್ ಡಿಟೆಕ್ಟರ್ ಅಳವಡಿಸಲಾಗುತ್ತಿದೆ. ಪರೀಕ್ಷೆಗೆ ಯಾವುದೇ ಡ್ರೆಸ್ ಕೋಡ್ ನಿಗದಿಪಡಿಸಿಲ್ಲ. ಪರೀಕ್ಷಾ ಕೇಂದ್ರದ ಶಾಲೆಗಳ ಶಿಕ್ಷಕರನ್ನು ಅದೇ ಕೇಂದ್ರಕ್ಕೆ ನೇಮಿಸಲ್ಲ. ಪರೀಕ್ಷಾ ಅಧಿಕಾರಿಗಳಾಗಿ ಅವರಿರುವ ಕೇಂದ್ರಕ್ಕೆ ಬಳಸಿಕೊಳ್ಳುವುದಿಲ್ಲ.  ಪರೀಕ್ಷಾ ಕೇಂದ್ರದ 100 ಮೀ. ಸುತ್ತ 144 ಸೆಕ್ಷನ್ ಜಾರಿಯಲ್ಲಿರುತ್ತೆ. ಎಂದು ಬಿ.ಸಿ.ನಾಗೇಶ್ ಸುದ್ದಿಗೊಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಪರೀಕ್ಷೆಗೆ  1ಗಂಟೆಗೂ ಮೊದಲೇ ಅಭ್ಯರ್ಥಿಗಳು ಬರಬೇಕು.  ಪರೀಕ್ಷಾ ಜವಾಬ್ದಾರಿ ನೋಡಿಕೊಳ್ಳಲು ಜಿಲ್ಲಾಧಿಕಾರಿ, ಸಿಇಒ ಎಸ್ ಪಿ  ನೇತೃತ್ವದಲ್ಲಿ ಕಮಿಟಿ ರಚನೆ ಮಾಡಲಾಗುತ್ತಿದೆ. ಪರೀಕ್ಷಾ ಕೇಂದ್ರದಲ್ಲಿ ಎರಡು ಹಂತದಲ್ಲಿ ತಪಾಸಣೆ ಇರಲಿದೆ.   ಆಶಾಲೆಯ ಶಿಕ್ಷಕರನ್ನ ಪರೀಕ್ಷಾ ಡ್ಯೂಟಿ ಇರಲ್ಲ. ಕೇವಲ ತಹಶೀಲ್ದಾರ್ ದರ್ಜೆಯ ಮೇಲ್ಮಟ್ಟದ ಅಧಿಕಾರಿಗಳ ಬಳಕೆ  ,ಮಾಡಲಾಗುತ್ತದೆ. ಮೇ 14ರಂದು ಪರೀಕ್ಷಾ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ ಎಂದು ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.

Key words: teacher -recruitment –exam- minister-BC Nagesh