ನಾವು ಎನ್ ಡಿಎ ಮೈತ್ರಿಕೂಟದ ಭಾಗ: ಮೂವರು ಒಂದಾಗಿ ಸರ್ಕಾರ ರಚನೆ- ಚಂದ್ರಬಾಬು ನಾಯ್ಡು ಹೇಳಿಕೆ.

ಆಂಧ್ರ ಪ್ರದೇಶ,ಜೂನ್,5,2024 (www.justkannada.in): ನಿನ್ನೆ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು  ಎನ್ ಡಿಎ 292 ಕ್ಷೇತ್ರಗಳಲ್ಲಿ ಜಯ ಸಾಧಿಸಿ ಬಹುಮತ ಪಡೆದಿದ್ದರೇ ಇತ್ತ ಇಂಡಿಯಾ ಮೈತ್ರಿಕೂಟ 234 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಇಂಡಿಯಾ ಮೈತ್ರಿಕೂಟ ಸಹ ಸರ್ಕಾರ ರಚನೆಗೆ ಕಸರತ್ತು ನಡೆಸಿ ಟಿಡಿಪಿ ನಾಯಕರನ್ನ ಸಂಪರ್ಕ ಮಾಡಿದೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು, ಎನ್ ಡಿಎ ಜೊತೆ ಚುನಾವಣೆ ಎದುರಿಸಿದ್ದೇವೆ. ಎನ್ ಡಿಎ ಒಕ್ಕೂಟದ ಜೊತೆ ಗೆದ್ದಿದ್ದೇವೆ.  ಅವರ ಜೊತೆಯೇ ಇರುತ್ತೇವೆ ಎಂದಿದ್ದಾರೆ.

ನಾವು ಎನ್ ಡಿಎ ಮೈತ್ರಿಕೂಟದ ಭಾಗ.  ಟಿಡಿಪಿ ಜನಸೇನಾ ಪಕ್ಷ ಬಿಜೆಪಿ ಒಗ್ಗಟ್ಟಾಗಿ ಕೆಲಸ ಮಾಡುದ್ದವು. ಈಗ ಮೂರು ಪಕ್ಷಗಳು ಒಟ್ಟಾಗಿ ಸರ್ಕಾರ ರಚನೆ ಮಾಡುತ್ತೇವೆ. ಇಂದು ಎನ್ ಡಿಎ ಸಭೆಯಲ್ಲಿ ಭಾಗವಹಿಸುತ್ತೇನೆ  ಎಂದು ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

Key words: TDP, part, NDA, Chandrababu Naidu