ಟ್ಯಾಕ್ಸ್ ಫೈಟ್ : ಸದನದಲ್ಲಿ ಕೇಂದ್ರದ ವಿರುದ್ದ ಸಿಎಂ ಸಿದ್ದರಾಮಯ್ಯ ಮತ್ತೆ ಗುಡುಗು: ಬಿಜೆಪಿ ಆಕ್ಷೇಪ.

ಬೆಂಗಳೂರು,ಫೆಬ್ರವರಿ,15,2024(www.justkannada.in): ರಾಜ್ಯಕ್ಕೆ ಕೇಂದ್ರದಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ ಸಂಬಂಧ ಇದೀಗ ವಿಧಾನಸಭೆ ಕಲಾಪದಲ್ಲಿ ಕೇಂದ್ರ ಸರ್ಕಾರದ ವಿರುದ್ದ ಸಿಎಂ ಸಿದ್ದರಾಮಯ್ಯ ಮತ್ತೆ ಗುಡುಗಿದ್ದಾರೆ.

ಅನುದಾನ ತಾರತಮ್ಯ ವಿಚಾರ ಸದನದಲ್ಲಿ ಪ್ರಸ್ತಾಪಿಸಿದ ಸಿಎಂ ಸಿದ್ದಾರಾಮಯ್ಯ, ತೆರಿಗೆ ಪಾವತಿಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ.  ನಮಗೆ ಆದರೆ ತೆರಿಗೆ ಆದಾಯದ ಪಾಲು ಕಡಿಮೆಯಾಗುತ್ತಿದೆ. 100 ರೂ.  ತೆರಿಗೆ ಸಂಗ್ರಹಿಸಿ 12 ರೂ. ನೀಡುತ್ತಿದೆ.  ಈ ಹಣದಿಂದ ರಾಜ್ಯದ ಅಭಿವೃದ್ದಿಗೆ ಸಾಕಾಗಲ್ಲ.  ಇದಕ್ಕಾಗಿಯೇ ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದು ರಾಜಕೀಯ ಮಾಡುತ್ತಿಲ್ಲ ಹಕ್ಕು ಕೇಳುತ್ತಿದ್ದೇವೆ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು , ಸಿಎಂ ರದ್ದು ಸರ್ವಾಧಿಕಾರಿ ಧೋರಣೆ ಎಂದು ಘೋಷಣೆ ಕೂಗಿದರು. ಈ ವೇಳೆ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ, ನಾನು ಉತ್ತರ ಪೂರ್ಣಗೊಳಿಸಿಲ್ಲ ಗದ್ದಲ ಮಾಡುತ್ತೀರಿ ಯಾವುದಕ್ಕೂ ನಾನು ಹೆದರಲ್ಲ ನಾನು ಗೂಂಡಾಗಿರಿಗೆ ಹೆದರಲ್ಲ. ನಾನು ರಾಜ್ಯದ ಜನರಿಗೆ ಸತ್ಯ ಹೇಳಬೇಕು.   ಫ್ಯಾಕ್ಟ್ ಈಸ್  ಪ್ಯಾಕ್ಟ್ ಎಂದರು. ಈ ವೇಳೆ ಗದ್ದಲ ಉಂಟಾಗಿ ಕಲಾಪ ಮುಂದೂಡಲಾಯಿತು.

Key words: Tax fight- CM Siddaramaiah – again -against – Center