ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ನಿರ್ಣಯ ರಾಜಕೀಯ ಸ್ಟಂಟ್ ಅಷ್ಟೆ- ಸಿಎಂ ಬೊಮ್ಮಾಯಿ ಟೀಕೆ.

ಬೆಂಗಳೂರು,ಮಾರ್ಚ್,22,2022(www.justkannada.in):  ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಕೈಗೊಂಡಿರುವ ನಿರ್ಣಯ ರಾಜಕೀಯ ಸ್ಟಂಟ್ ಅಷ್ಟೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಮೇಕೆದಾಟು ವಿಚಾರದಲ್ಲಿ ತಮಿಳುನಾಡು ರಾಜಕೀಯ ಮಾಡುತ್ತಿದೆ.  ತಮಿಳುನಾಡಿನವರಿಗೆ ಕಾವೇರಿ ಒಂದು ರಾಜಕೀಯ ದಾಳವಾಗಿದೆ. ತಮಿಳುನಾಡು ಕಾವೇರಿ ವಿಚಾರವಾಗಿ ರಾಜಕಾರಣ ಮಾಡುತ್ತಲೇ ಬಂದಿದೆ.  ನೀರು ಕೊಡಲು ಕಾವೇರಿ ನೀರಾವರಿ ನಿಗಮ ಬೋರ್ಡ್ ಇದೆ. ಟ್ರಬ್ಯುನಲ್ ಮೂಲಕ ನೀರು ಹಂಚಿಕೆಯಾಗಿದೆ.

ನಾವು ಸರ್ವಪಕ್ಷ ಸಭೆ ಮಾಡಿದ್ದಕ್ಕೆ ಅವರು ಹಾಗೆ ಮಾಡಿದ್ದಾರೆ. ಇದು ರಾಜಕೀಯ ಸ್ಪಂಟ್ ಅಷ್ಟೆ. ತಮಿಳುನಾಡು ನಿರ್ಧಾರಕ್ಎಕ ಯಾವುದೇ ಬೆಲೆ ಇಲ್ಲ. ಡಿಪಿಆರ್ ನಿಂದ ಎಲ್ಲವನ್ನೂ ಸರಿಪಡಿಸಿಕೊಳ್ಳುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: Tamilnadu-decision-mekedatu plan-CM Bommai.