ಕಿಚ್ಚನ ಚಿತ್ರಕ್ಕೆ ತಮಿಳಿನ ಖ್ಯಾತ ನಿರ್ದೇಶಕ ವೆಂಕಟ್ ಪ್ರಭು ಆ್ಯಕ್ಸನ್ ಕಟ್

ಬೆಂಗಳೂರು, ಆಗಸ್ಟ್ 25, 2021 (www.justkannada.in): ಕಿಚ್ಚನ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಇದಕ್ಕೆ ಉತ್ತರ ಸಿಕ್ಕಿದೆ. ತಮಿಳಿನ ಖ್ಯಾತ ನಿರ್ದೇಶಕರ ಜೊತೆ ಸುದೀಪ್ ಸಿನಿಮಾ ಮಾಡುತ್ತಿದ್ದಾರೆ.

ತಮಿಳು ನಿರ್ದೇಶಕ ವೆಂಕಟ್ ಪ್ರಭು ಇತ್ತೀಚಿಗಷ್ಟೆ ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಬೆಂಗಳೂರಿಗೆ ಆಗಮಿಸಿದ್ದ ವೆಂಕಟ್ ಪ್ರಭು ಕಿಚ್ಚನ ಮನೆಗೆ ಭೇಟಿನೀಡಿದ್ದರು. ಈ ಸಮಯದಲ್ಲಿ ಸುದೀಪ್ ಕೈಯಾರೆ ವಿಶೇಷ ತಿನಿಸು ಮಾಡಿ ಬಡಿಸಿದ್ದಾರೆ.

“ಇಂಥ ಅದ್ಭುತ ಆತಿಥ್ಯ. ನೀವು ಅದ್ಭುತವಾಗಿ ಅಡುಗೆ ಮಾಡುತ್ತೀರಿ. ಧನ್ಯವಾದಗಳು. ನಮ್ಮ ಮುಂದಿನ ಚಿತ್ರಕ್ಕಾಗಿ ಉತ್ಸುಕನಾಗಿದ್ದೇನೆ. ಜನ್ಮದಿನದ ಶುಭಾಶಯಗಳು” ಎಂದು ವೆಂಕಟ್ ಪ್ರಭು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.