ಕಂಪಲಾಪುರ ಗ್ರಾ.ಪಂಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭೇಟಿ, ಪರಿಶೀಲನೆ…

ಪಿರಿಯಾಪಟ್ಟಣ,ಮೇ,17,2021(www.justkannada.in):   ತಾಲ್ಲೂಕಿನ ಕಂಪಲಾಪುರ ಗ್ರಾಮ ಪಂಚಾಯಿತಿಗೆ ಸೋಮವಾರ ಭೇಟಿ ನೀಡಿದ ತಾಪಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣಕುಮಾರ್ ನೂತನ ಗ್ರಾಪಂ ಕಟ್ಟಡ ವೀಕ್ಷಣೆ ಮಾಡಿದರು.jk

ಆಸಕ್ತರಿಗೆ ಜಾಬ್ ಕಾರ್ಡ್ ಮಾಡಿಸಿಕೊಡುವ ಮೂಲಕ ಉದ್ಯೋಗ ದೊರಕಿಸಿಕೊಡಿ. ನರೇಗಾ ಯೋಜನೆಯಡಿ ಅಭಿವೃದ್ಧಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.  ಒತ್ತುವರಿಯಾಗಿದ್ದ ಎರಡು ಎಕರೆ ಗ್ರಾಮ ಠಾಣಾ ಸ್ಥಳವನ್ನು ಉದ್ಯಾನವನವನ್ನಾಗಿ ಅಭಿವೃದ್ಧಿ ಪಡಿಸುವಂತೆ ತಾಪಂ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಕುಮಾರ್ ಸೂಚಿಸಿದರು.taluk-panchayat-executive-officer-visits-piriyapatna-kampalapur-grama-panchayath

ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಕುಮಾರ್ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಪಿಡಿಓ ಪರಮೇಶ್, ಗ್ರಾಪಂ ಅಧ್ಯಕ್ಷರಾದ ರಾಣಿ, ಕಾರ್ಯದರ್ಶಿ ಸುಸ್ಮಾ ಇತರರು ಉಪಸ್ಥಿತರಿದ್ದರು.

Key words: Taluk Panchayat- Executive Officer- Visits –piriyapatna-Kampalapur –grama panchayath