ಸಿಎಂ ಜತೆ ಮಾತನಾಡುವೆ: ಖಾತೆ ಬದಲಾಗದಿದ್ರೆ ಮುಂದಿನ ನಿರ್ಧಾರ- ಸಚಿವ ಎಂಟಿಬಿ ನಾಗರಾಜ್.

ಬೆಂಗಳೂರು,ಆಗಸ್ಟ್,8,2021(www.justkannada.in): ಸಿಎಂ ಬಸರಾಜ ಬೊಮ್ಮಾಯಿ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೆ ಸಚಿವ ಆನಂದ್ ಸಿಂಗ್ ಮತ್ತು ಎಂಟಿಬಿ ನಾಗರಾಜ್ ತಮಗೆ ಸಿಕ್ಕಿರುವ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಚಿವ ಎಂಟಿಬಿ ನಾಗರಾಜ್,   ಖಾತೆ ಹಂಚಿಕೆ ಸಂಬಂಧ ಅಸಮಾಧಾನ ಇದೆ ಎಂದಿದ್ದೇನೆ. ಈ ಕುರಿತು ಚರ್ಚಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗುವೆ. ಸಿಎಂ ಭೇಟಿ ಮಾಡಿ ಮಾತನಾಡುತ್ತೇನೆ. ಅವರು ಏನು ಹೇಳುತ್ತಾರೆ ನೋಡಿಕೊಂಡು ಮುಂದೆ ತೀರ್ಮಾನ ಮಾಡ್ತೇನೆ.  ಸಿಎಂ ಭೇಟಿಯಾದ ಬಳಿಕ ಮಾತನಾಡುತ್ತೇನೆ. ಖಾತೆ ಬದಲಾಗದಿದ್ದರೇ ನಮ್ಮ ಮುಂದಿನ ನಿರ್ಧಾರವನ್ನ ತಿಳಿಸುತ್ತೇನೆ ಎಂಧು ತಿಳಿಸಿದ್ದಾರೆ.cabinet-expansion-mtb-nagaraj-cm-high-command

ಹೀಗಾಗಲೇ ಸಚಿವ ಆನಂದ್ ಸಿಂಗ್ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಿ ಚರ್ಚೆ ನಡೆಸಿ ತೆರಳಿದ್ದಾರೆ.

Key words: Talking – CM-Basavaraj bommai-next decision -Minister -MTB Nagaraj.