ಕಾಟಾಚಾರಕ್ಕೆ ತನಿಖೆ ಬೇಡ: ಕಠಿಣ ಕ್ರಮ ಕೈಗೊಂಡು  ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನ್ಯಾಯ ಕೊಡಿಸಿ- ಹೆಚ್.ಡಿಕೆ ಆಗ್ರಹ.

ದಕ್ಷಿಣ ಕನ್ನಡ,ಆಗಸ್ಟ್,1,2022(www.justkannada.in): ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟಾಚಾರಕ್ಕೆ ತನಿಖೆ ಬೇಡ ಕಠಿಣ ಕ್ರಮ ಕೈಗೊಂಡು ಅವರ ಕುಟುಂಬಕ್ಕೆ ನ್ಯಾಯ ಕೊಡಿಸಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದರು.

ಇಂದು ಬೆಳ್ಳಾರೆಯ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ 5 ಲಕ್ಷ ರೂ. ಪರಿಹಾರ ವಿತರಿಸಿದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪ್ರವೀಣ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ. ಪ್ರವೀಣ್ ಕುಟುಂಬಸ್ಥರ ಸಮಸ್ಯೆ ಆಲಿಸಿದ್ದೇನೆ. ಪ್ರವೀಣ್ ಕೊಲೆ ಮಾಡಿದವರಿಗೆ ಶಿಕ್ಷೆಯಾಗಬೇಕು. ಕೆಲದಿನದ ಅನುಕಂಪ ಬೇಡ.  ನ್ಯಾಯ ಕೊಡಿಸಿ ಎಂದರು.

ಸರ್ಕಾರ ಕಾಟಾಚಾರಕ್ಕೆ ಪ್ರಕರಣವನ್ನ ಎನ್ ಐಎ ತನಿಖೆಗೆ ವಹಿಸಿದಾರೆ. ಸರ್ಕಾರಕ್ಕೆ ನಾನು ಹೇಳುತ್ತೇನೆ. ಕಾಟಾಚಾರಕ್ಕೆ ತನಿಖೆ ಬೇಡ, ಕಠಿಣ ಕ್ರಮ ಕೈಗೊಳ್ಳಬೇಕು.  ನಮ್ಮಲ್ಲೆ ಸಮರ್ಥ ಅಧಿಕಾರಿಗಳಿದ್ದಾರೆ. ಆದರೆ ಜವಾಬ್ದಾರಿ ಕಳೆದುಕೊಳ್ಳಲು ಎನ್ ಐಎಗೆ ವಹಿಸಿದ್ದಾರೆ. ನಮ್ಮ ಪೊಲೀಸರಿಗೂ ಸಮಸ್ಯೆ ಬಗೆಹರಿಸುವ ಸಾಮರ್ಥ್ಯ ಇದೆ. ತನಿಖೆ ಎನ್ ಐಎಗೆ ವರ್ಗಾಯಿಸಿದ್ದು ಸರಿಯಲ್ಲ ಎಂದರು.

Key words: Take-strict action – give- justice -Praveen Nettaru’s –family-  HD Kumaraswamy