Sunday, September 27, 2026

BDA Apartments

ಲಾಕ್ ಡೌನ್ ಗಂಭೀರವಾಗಿ ಪರಿಗಣಿಸಿ ಮನೆಯಲ್ಲೇ ಇರಿ: ಪ್ರಧಾನಿ ಮೋದಿ BDA JK_Adv BDA Adv
Home Front Page ಲಾಕ್ ಡೌನ್ ಗಂಭೀರವಾಗಿ ಪರಿಗಣಿಸಿ ಮನೆಯಲ್ಲೇ ಇರಿ: ಪ್ರಧಾನಿ ಮೋದಿ

ಲಾಕ್ ಡೌನ್ ಗಂಭೀರವಾಗಿ ಪರಿಗಣಿಸಿ ಮನೆಯಲ್ಲೇ ಇರಿ: ಪ್ರಧಾನಿ ಮೋದಿ

ನವದೆಹಲಿ, ಮಾರ್ಚ್ 23, 2020 (www.justkannada.in): ಜನರು ಲಾಕ್ ಡೌನ್ ಅನುಸರಿಸುತ್ತಿಲ್ಲ. ಜನರು ಕಾನೂನನ್ನು ಪಾಲಿಸಬೇಕೆಂದು ಮೋದಿ ಟ್ವಿಟ್ ಮಾಡಿದ್ದಾರೆ.

ದೇಶದಲ್ಲಿ ಕರೋನಾ ವೈರಸ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ದೇಶದ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಇದರ ಹೊರತಾಗಿಯೂ ಜನರು ನಿರಂತರವಾಗಿ ತಮ್ಮ ಮನೆಗಳಿಂದ ಹೊರಹೋಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಮಾತನಾಡಿದ್ದಾರೆ.

ಅನೇಕ ಜನರು ಇನ್ನೂ ಲಾಕ್‌ಡೌನ್ ಅನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ದಯವಿಟ್ಟು ನಿಮ್ಮನ್ನು ನೀವು ಉಳಿಸಿ. ನಿಮ್ಮ ಕುಟುಂಬವನ್ನು ಉಳಿಸಿ. ಸೂಚನೆಗಳನ್ನು ಗಂಭೀರವಾಗಿ ಅನುಸರಿಸಿ. ನಿಯಮಗಳು ಮತ್ತು ಕಾನೂನುಗಳನ್ನು ಅನುಸರಿಸಲು ರಾಜ್ಯ ಸರ್ಕಾರಗಳನ್ನು ಕೋರುತ್ತೇನೆ ಎಂದು ಮೋದಿ ಟ್ವಿಟ್ ಮಾಡಿದ್ದಾರೆ.