ಬಿಲ್ ಕಲೆಕ್ಟರ್, ನರ್ಸ್’ಗಳಿಗೆ ಕೊರೊನಾ: ತಿ.ನರಸೀಪುರ ಪುರಸಭೆ, ಸಾರ್ವಜನಿಕರ ಆಸ್ಪತ್ರೆ ಸೀಲ್ ಡೌನ್ ಸಾಧ್ಯತೆ

ಮೈಸೂರು, ಜುಲೈ 26, 2020 (www.justkannada.in): ತಿ.ನರಸೀಪುರ ತಾಲೂಕಿನಲ್ಲಿ ಕೊರೊನ ಹೆಚ್ಚಳವಾಗಿದೆ.

ಒಂದೇ ದಿನ ಬರೋಬ್ಬರಿ ಹತ್ತು ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ನರಸೀಪುರದಲ್ಲಿ 101 ಕ್ಕೇರಿದ ಸೋಂಕಿತರ ಸಂಖ್ಯೆ.

ಪುರಸಭೆಯ ಬಿಲ್ ಕಲೆಕ್ಟರ್ ಹಾಗೂ ಸಾರ್ವಜನಿಕ ಆಸ್ಪತ್ರೆಯ ಐವರು ನರ್ಸ್ ಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬನ್ನೂರು ಪಟ್ಟಣದಲ್ಲಿ ಮತ್ತೆ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಇದರಿಂದಾಗಿ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದೆ. ಇನ್ನು ಪುರಸಭಾ ಕಚೇರಿ ಮತ್ತು ಸಾರ್ವಜನಿಕರ ಆಸ್ಪತ್ರೆ ಸೀಲ್ ಡೌನ್ ಸಾಧ್ಯತೆ ಇದೆ.