ಸೆಮಿಫೈನಲ್ ನಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ: ಫೈನಲ್ ಗೆ ಇಂಗ್ಲೇಂಡ್.

ಅಡಿಲೇಡ್,ನವೆಂಬರ್,10,2022(www.justkannada.in):   ಇಂದು ನಡೆದ ಟಿ-20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೇಂಡ್ ವಿರುದ್ಧ ಸೋಲನುಭವಿಸಿದ್ದು ಆಂಗ್ಲರ ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ.

ಇಂಗ್ಲೇಂಡ್ ತಂಡ ಟಾಸ್ ಗೆದ್ದು ಫಿಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಂಟಿಂಗ್ ಮಾಡಿದ ಟೀಂ ಇಂಡಿಯಾ ವಿರಾಟ್ ಕೊಹ್ಲಿ 50 ರನ್, ಹಾರ್ದಿಕ್ ಪಾಂಡ್ಯ  63 ರನ್ ನೆರವಿನಿಂದ ಇಂಗ್ಲೇಂಡ್ ತಂಡಕ್ಕೆ 168 ರನ್ ಗಳ ಗುರಿ ನೀಡಿತು.

ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರರಾದ ಜೋಸ್ ಬಟ್ಲರ್ ಮತ್ತು ಹೇಲ್ಸ್ ಭಾರತೀಯ ಬೌಲರ್ ಗಳನ್ನ ದಂಡಿಸಿದರು.  ಬಟ್ಲರ್  80 ರನ್  , ಅಲೆಕ್ಸ್ ಹೇಲ್ಸ್  86 ರನ್ ಬಾರಿಸಿ ಇಂಗ್ಲೇಂಡ್ ತಂಡಕ್ಕೆ ಜಯ ತಂದುಕೊಟ್ಟರು. ಈ ಮೂಲಕ ಇಂಗ್ಲೇಂಡ್ ಫೈನಲ್ ಪ್ರವೇಶಿಸಿದ್ದು ನವೆಂಬರ್ 13 ರಂದು ಪಾಕಿಸ್ತಾನದ ಜೊತೆ ಸೆಣೆಸಾಡಲಿದೆ.

Key words: t-20 world cup- Team India- lose-semi-final-England – final.