ಟಿ-20 ವಿಶ್ವಕಪ್ : ನೆದರ್ಲ್ಯಾಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ.

ಆಸ್ಟ್ರೇಲಿಯಾ,ಅಕ್ಟೋಬರ್,27,2022(www.justkannada.in): ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರುತ್ತಿದ್ದು ಇಂದು ನೆದರ್ಲ್ಯಾಡ್ ವಿರು‍ದ್ದ 56 ರನ್ ಗಳ  ಭರ್ಜರಿ ಜಯ ಸಾಧಿಸಿದೆ.

ಟಾಸ್ ಗೆದ್ಧು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಬೇಗನೆ ರಾಹುಲ್ (9 ರನ್) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೇ  ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅದ್ಬುತ ಜೊತೆಯಾಟವಾಡಿ ಭಾರತದ ರನ್ ವೇಗ ಹೆಚ್ಚಿಸಿದರು. ರೋಹಿತ್ ಶರ್ಮಾ 39 ಬಾಲ್ ಗೆ  53 ರನ್ ಗಳಿಸಿ ಔಟ್ ಆದರು. ವಿರಾಟ್ ಕೊಹ್ಲಿ 44 ಬಾಲ್ ಗೆ 62 ರನ್, ಸೂರ್ಯಕುಮಾರ್ ಯಾದವ್ ಅವರ 25 ಬಾಲ್ ಗೆ 52 ರನ್ ಗಳ ನೆರವಿನಿಂದ ಟೀಂ ಇಂಡಿಯಾ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು.

ಗುರಿ ಬೆನ್ನತ್ತಿದ ನೆದರ್ಲಾಂಡ್ ಬ್ಯಾಟ್ಸ್ ಮನ್ ಗಳು ಭಾರತೀಯ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದರು.  ಅಂತಿಮವಾಗಿ ನೆದರ್ಲಾಂಡ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಭಾರತ 56 ರನ್ ಗಳ ಭರ್ಜರಿ ಜಯ ಸಾಧಿಸಿದರು.

ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಅವರ ಅದ್ಬುತ ಬ್ಯಾಟಿಂಗ್ ನಿಂದ ಟೀಂ ಇಂಡಿಯಾ  ರೋಚಕ ಜಯ ಸಾಧಿಸಿತ್ತು. ಮುಂದಿನ ಪಂದ್ಯಗಳು ದಕ್ಷಿಣ ಆಫ್ರಿಕಾ, ಜಿಬಾಂಬ್ವೆ, ಮತ್ತು ಬಾಂಗ್ಲಾದೇಶದ ವಿರುದ್ಧ ನಡೆಯಲಿದೆ.

Key words: T-20 World Cup- India- win -against -Netherlands