ಮೈಸೂರು,ಅಕ್ಟೋಬರ್,28,2025 (www.justkannada.in): ರಾಜ್ಯ ಪ್ಯಾರಾ ಈಜು ಚಾಂಪಿಯನ್ ಶಿಪ್ ನಲ್ಲಿ ಮೈಸೂರಿನ ಮೋಹಿತ್ ಎಸ್.ಬಿ. ಅವರು ಮೂರು ಚಿನ್ನದ ಪದಕವನ್ನು ಪಡೆದಿದ್ದಾರೆ.
ಬೆಂಗಳೂರಿನ ವೈಟ್‌ಫೀಲ್ಡ್ ನಲ್ಲಿರುವ ದೀನ್ಸ್ ಸ್ವಿಮ್ ಅಕಾಡೆಮಿಯಲ್ಲಿ ಅ. 26ರಂದು ನಡೆದ ಈಜು ಸ್ಪರ್ಧೆಯಲ್ಲಿ ಮೋಹಿತ್ ಅವರು 100 ಮತ್ತು 50 ಮೀಟರ್ ಫ್ರೀ ಸ್ಟೇಲ್ ನಲ್ಲಿ ಚಿನ್ನದ ಪದಕ ಹಾಗೂ 50 ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ ಚಿನ್ನದ ಪದಕವನ್ನು ಪಡೆದು ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ.
ಇವರು ಮೈಸೂರಿನ ಜೆ.ಪಿ.ನಗರದಲ್ಲಿರುವ ಜಿ.ಎಸ್.ಎ. ಈಜುಕೊಳದಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಸಾಧನೆಯ ಮೂಲಕ ಮುಂದಿನ ತಿಂಗಳು ಹೈದರಾಬಾದ್ ನಲ್ಲಿ ನಡೆಯಲಿರುವ 25ನೇ ರಾಷ್ಟ್ರೀಯ ಪ್ಯಾರಾ ಈಜು ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದಿದ್ದಾರೆ.
ಮೋಹಿತ್ ಅವರ ಈ ಸಾಧನೆ ಯುವ ಪ್ಯಾರಾ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದ್ದು, ತನ್ನ ಪರಿಶ್ರಮದಿಂದ ಪ್ಯಾರಾ ಈಜು ಕ್ಷೇತ್ರದಲ್ಲಿ ಕರ್ನಾಟಕದ ಹೆಮ್ಮೆ ಹೆಚ್ಚಿಸುವ ನಿರೀಕ್ಷೆಯೊಂದಿಗೆ ಮುಂದುವರೆಯುತ್ತಿದ್ದಾರೆ. ಅವರ ಈ ಯಶಸ್ಸು ಕೇವಲ ವೈಯಕ್ತಿಕ ಸಾಧನೆಯೇ ಆಗದೆ, ಸಮಾಜದಲ್ಲಿ ಪ್ಯಾರಾ ಕ್ರೀಡಾಪಟುಗಳು ಈಜು ಸ್ಪರ್ಧೆಯಲ್ಲಿ ಮುಂದುವರಿಸಲು ಪ್ರೇರಣೆಯಾಗಿದೆ ಎಂದು ಜಿ.ಎಸ್.ಎ.ನ ಮುಖ್ಯ ತರಬೇತುದಾರ ಪವನ್‌ಕುಮಾರ್, ಕಿಶೋರ್‌ಕುಮಾರ್ ತಿಳಿಸಿದ್ದಾರೆ. ಮೋಹಿತ್ ಸಾಧನೆಗೆ ಜಿ.ಎಸ್.ಎ ವ್ಯವಸ್ಥಾಪಕರು ಹಾಗೂ ತರಬೇತುದಾರರು ಅಭಿನಂದನೆ ಸಲ್ಲಿಸಿದ್ದಾರೆ.
ENGLISH SUMMARY…
Mysuru Swimmer Mohit Wins Triple Gold at State Para Championship
Bengaluru, Oct 26:
Young swimmer Mohit S. B. from GSA, JP Nagar, Mysuru, bagged three gold medals at the State Para Swimming Championship, held at Deen’s Swim Academy, Whitefield, Bengaluru, on October 26.
He excelled in the 100 m freestyle, 50 m freestyle, and 50 m backstroke events, showcasing remarkable talent and determination.
With this feat, Mohit has qualified to represent Karnataka at the 25th National Para Swimming Championship, scheduled to be held next month in Hyderabad.
Key words: Swimming, Mysore, Mohit, wins, three, gold medals







