ಸ್ವಚ್ಚ ಸರ್ವೇಕ್ಷಣ್ 2020 ಹಿನ್ನೆಲೆ:  ಮೈಸೂರಿನಲ್ಲಿ ಸರ್ವಧರ್ಮ ಗುರುಗಳ ಸಮಾವೇಶ: ಹಲವು ಗಣ್ಯರು ಭಾಗಿ….

kannada t-shirts

ಮೈಸೂರು,ಜ,10,2020(www.justkannada.in): ಸ್ವಚ್ಚ ಸರ್ವೇಕ್ಷಣ್ 2020 ಪ್ರಗತಿಯಲ್ಲಿರುವ ಹಿನ್ನೆಲೆ. ಮೈಸೂರು ನಗರವನ್ನು ನಂಬರ್ ಒನ್ ಸ್ವಚ್ಚತಾ ನಗರವನ್ನಾಗಿಸಲು ಮಹಾನಗರ ಪಾಲಿಕೆಯಿಂದ ವಿವಿಧ ಕಾರ್ಯಕ್ರಮಗಳು ಆಯೋಜನೆ ಮಾಡಲಾಗುತ್ತಿದೆ.

ಈ ನಿಟ್ಟಿನಲ್ಲಿ ಇಂದು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಇಂದು ಸರ್ವಧರ್ಮ ಗುರುಗಳ ಸಮಾವೇಶ ಆಯೋಜನೆ ಮಾಡಲಾಗಿತ್ತು.  ಸಮಾವೇಶದಲ್ಲಿ ಸುತ್ತೂರು ಮಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹೊಸ ಮಠದ ಚಿದಾನಂದ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ ಸೇರಿದಂತೆ ಇತರ ಧರ್ಮಗುರುಗಳು ಭಾಗಿಯಾಗಿದ್ದರು.

ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಮೇಯರ್ ಪುಷ್ಪಲತಾ ಜಗನ್ನಾಥ್, ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಮೈಸೂರು ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

Key words:Swachh Survekshan 2020-mysore- -Sarvodharma Guru  Conference

website developers in mysore