ಮೈಸೂರಿನಲ್ಲಿ ಅನುಮಾನಸ್ಪದ ಸೂಟ್ ಕೇಸ್ ಪತ್ತೆ: ಬಾಂಬ್ ಪತ್ತೆ ದಳ ಭೇಟಿ, ಪರಿಶೀಲನೆ…

ಮೈಸೂರು,ಜೂ,16,2020(www.justkannada.in): ರಾಜ್ಯದಲ್ಲಿ ಕೊರೋನಾ ಅಟ್ಟಹಾಸದ ನಡುವೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅನುಮಾನಸ್ಪದವಾಗಿ ಸೂಟ್ ಕೇಸ್ ಪತ್ತೆಯಾಗಿದ್ದು ಸಾಕಷ್ಟು ಆತಂಕ ಸೃಷ್ಠಿಸಿದೆ.

ಮೈಸೂರಿನ ನ್ಯೂ ಸಯ್ಯಾಜಿ ರಾವ್ ರಸ್ತೆಯಲ್ಲಿ ಅನುಮಾನಾಸ್ಪದ ಸೂಟ್ ಕೇಸ್ ಪತ್ತೆಯಾಗಿದೆ. ಮುಖ್ಯ ರಸ್ತೆಯಲ್ಲೇ ಟ್ರಾವೆಲರ್ ಬ್ಲೂ ಕಲರ್ ನ ಸೂಟ್ ಕೇಸ್ ಪತ್ತೆಯಾಗಿದ್ದು ಸ್ಥಳಕ್ಕೆ ಬಾಂಬ್ ಪತ್ತೆ ದಳ ಭೇಟಿ ನೀಡಿ  ಪರಿಶೀಲನೆ ನಡೆಸುತ್ತಿದೆ. ಬಾಂಬ್ ಪತ್ತೆ ದಳ ಸೂಟ್ ಕೇಸ್ ಸುತ್ತ ಬ್ಯಾರಿಕೇಡ್ ಹಾಕಿ ತಪಾಸಣೆ ನಡೆಸುತ್ತಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.Suspicious -Suit Case- Detection -Mysore.

ಎರಡು ಕಡೆ ರಸ್ತೆ ಬಂದ್ ಮಾಡಲಾಗಿದ್ದು  ಸಾರ್ವಜನಿಕರು ಸುಳಿದಾಡದಂತೆ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದೆ. ಜನರು ಸುಮಾರು 50 ಅಡಿ ದೂರರಿಂದ ಸೂಟ್ಕೇಸ್ ವೀಕ್ಷಿಸುತ್ತಿದ್ದಾರೆ. ಕೆ.ಆರ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Key words: Suspicious -Suit Case- Detection -Mysore.