ಯಾದಗಿರಿ ಬಸ್ ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಗ್ ಪತ್ತೆ: ಆತಂಕಗೊಂಡ ನಾಗರೀಕರು….

ಯಾದಗಿರಿ,ಜ,21,2020(www.justkannada.in): ನಿನ್ನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಹಿನ್ನೆಲೆ ಜನರು ಆತಂಕದಿಂದ ಹೊರಬರುವ ಮುನ್ನವೇ ಇದೀಗ ಯಾದಗಿರಿಯಲ್ಲೂ ಅನುಮಾಸ್ಪದ ಬ್ಯಾಗ್ ಪತ್ತೆಯಾಗಿದೆ.

ಯಾದಗಿರಿ ಬಸ್ ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಗ್ ಪತ್ತೆಯಾಗಿದ್ದು ಬ್ಯಾಗ್ ಪತ್ತೆಯಾದ ಹಿನ್ನೆಲೆ ನಾಗರೀಕರು ಆತಂಕಗೊಂಡಿದ್ದರು. ಈ ವಿಚಾರ ತಿಳಿದ ಕೂಡಲೇ  ಸ್ಥಳಕ್ಕೆ ಬಾಂಬ್ ನಿಷ್ಕ್ರಿಯಾದಳ ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದ್ದು , ತಪಾಸಣೆ ವೇಳೆ ಬ್ಯಾಗ್ ನಲ್ಲಿ ಬಟ್ಟೆ ಮತ್ತು ಹಣ ಪತ್ತೆಯಾಗಿದೆ.

ನಿನ್ನೆ ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಹಿನ್ನಲೆ ಇದೀಗ ಯಾದಗಿರಿ ಬಸ್ ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಗ್ ಪತ್ತೆಯಾಗಿದ್ದಕ್ಕೆ ಜನರು ತೀವ್ರ ಆತಂಕಕ್ಕೊಳಗಾಗಿದ್ದರು. ಆದರೆ ಬ್ಯಾಗ್ ನಲ್ಲಿ ಬಟ್ಟೆ ಮತ್ತು ಹಣ ಪತ್ತೆಯಾದ ಹಿನ್ನೆಲೆ ಜನರು ನಿಟ್ಟುಸಿರು ಬಿಟ್ಟರು. ನಿನ್ನೆ ಮಂಗಳೂರು ಏರ್ ಪೋರ್ಟ್ ನಲ್ಲಿ ವ್ಯಕ್ತಿಯೋರ್ವ ಬಾಂಬ್ ಇದ್ದ ಬ್ಯಾಗ್ ಇಟ್ಟು ಹೋಗಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆ ಚಿತ್ರವನ್ನ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಇನ್ನು ನಿನ್ನೆ ಪತ್ತೆಯಾಗಿದ್ದ ಬಾಂಬ್ ಅನ್ನ ಪೊಲೀಸರು ಕೆಂಜಾರು ಮೈದಾನಕ್ಕೆ ಸೇಫಾಗಿ ಸ್ಥಳಾಂತರಿಸಿ ನಿರ್ಜನ ಪ್ರದೇಶದಲ್ಲಿ ಸ್ಪೋಟಿಸಿದ್ದರು.

Key words: Suspicious bag- found – Yadagiri -bus stop- Dog Squad- Bomb Squad