ಆಲ್ ಖೈದಾ ಜೊತೆ ನಂಟು ಆರೋಪ: ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ.

ಬೆಂಗಳೂರು,ಫೆಬ್ರವರಿ,11,2023(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ಉಗ್ರನನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಥಣಿಸಂದ್ರದ ಮಂಜುನಾಥ್ ನಗರದಲ್ಲಿ ಐಎಸ್ ​ಡಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರ ಆರೀಫ್​  ಎಂಬುವವನ್ನ ಬಂಧಿಸಿದ್ದಾರೆ.  ಶಂಕಿತ ಉಗ್ರ ಆರೀಫ್  ಅಲ್​ಖೈದಾ ಉಗ್ರ ಸಂಘಟನೆ ಜೊತೆ ಸಂಪರ್ಕದಲ್ಲಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಈತ ಕಳೆದ 2 ವರ್ಷಗಳಿಂದ ಅಲ್​ಖೈದಾ ಜೊತೆ ಸಂಪರ್ಕದಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ವರ್ಕ್ ಫರ್ಮ್ ಹೋಮ್ ಮೂಲಕ ಮನೆಯಲ್ಲೆ ಕೆಲಸ ಮಾಡ್ತಿದ್ದ ಆರೀಫ್​ಗೆ ಉಗ್ರ ಸಂಘಟನೆಗಳಲ್ಲಿ ಸೇರಿಕೊಳ್ಳಬೇಕು ಎಂಬ ಕನಸಿತ್ತು. ಅದರಂತೆ ಸಾಮಾಜಿಕ ಜಾಲತಾಣಗಳು, ವೆಬ್​ ಸೈಟ್​ ಮೂಲಕ ಉಗ್ರ ಸಂಘಟನೆಗಳನ್ನು ಸೇರಲು ತಯಾರಿ ನಡೆಸಿದ್ದ ಎನ್ನಲಾಗಿದೆ.

Key words: Suspected -terrorist -arrested – Bengaluru