ರಿಯಾ ಜೊತೆಗಿನ ಸುಶಾಂತ್ ಫೋಟೋ ವೈರಲ್ !

ಮುಂಬೈ, ಜೂನ್ 15, 2020 (www.justkannada.in): ನಟಿ ರಿಯಾ ಚಕ್ರವರ್ತಿ ಜೊತೆಗಿನ ಸುಶಾಂತ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಜಿಮ್ ಹೊರಗಡೆಯ ಸುಶಾಂತ್ ಸಿಂಗ್ ಹಾಗೂ ರಿಯಾ ಚಕ್ರವರ್ತಿ ಜೊತೆಗಿರುವ ಈ ಫೋಟೋ ಇದಾಗಿದ್ದು, ಮಾರ್ಚ್ 11 ರಂದು ತೆಗೆಯಲಾಗಿದೆ. ಈ ಫೋಟೋದಲ್ಲಿ ಸುಶಾಂತ್ ಸಿಂಗ್ ನೀಲಿ ಬಣ್ಣದ ಟಿ ಶಾರ್ಟ್ ಮತ್ತು ಕಪ್ಪು ಬಣ್ಣದ ಶಾರ್ಟ್ಸ್ ಧರಿಸಿದ್ದರೆ, ರಿಯಾ, ಗ್ಯಾಲಕ್ಸಿಯ ಪ್ರಿಂಟ್ ಯೋಗ ಶಾರ್ಟ್ಸ್ ಹಾಗೂ ಗ್ರೇ ಟಾಫ್ ಧರಿಸಿದ್ದಾರೆ.

ಸುಶಾಂತ್ ಹಾಗೂ ರಿಯಾ ಆಗಾಗ್ಗೆ ಒಟ್ಟಿಗೆ ಜಿಮ್ ಮಾಡುತ್ತಿದ್ದರು. ಜಿಮ್ ಹೊರಗಡೆ ಹಲವು ಬಾರಿ ಅವರು ಕಾಣಿಸಿಕೊಂಡಿದ್ದರು. ಅಂದಹಾಗೆ ಸಂದರ್ಶನವೊಂದರಲ್ಲಿ,  ಸುಶಾಂತ್ ಒಳ್ಳೆಯ ಸ್ನೇಹಿತರಾಗಿದ್ದು, ಹಲವು ವರ್ಷಗಳಿಂದ ಚೆನ್ನಾಗಿ ಗೊತ್ತಿದೆ. ಈ ವಿಚಾರದಲ್ಲಿ ಏನನ್ನೂ ಹೇಳಲು ಬಯಸಲ್ಲ ಎಂದು ರಿಯಾ ಹೇಳಿದ್ದರು.