ರೈತನ ಬಳಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇಯರ್.

ಬಾಗಲಕೋಟೆ,ಡಿಸೆಂಬರ್,18,2023(www.justkannada.in): ರೈತರೊಬ್ಬರ ಬಳಿ ಲಂಚ ಸ್ವೀಕರಿಸುವಾಗ ಸರ್ವೇಯರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಮಹಾಂತೇಶ್ ಕವಳಿಕಟ್ಟಿ ಲೋಕಾಯುಕ್ತದ ಬಲೆಗೆ ಬಿದ್ದ ಸರ್ವೇಯರ್. ಬಾಗಲಕೋಟೆ ಬೀಳಗಿ  ತಾಲ್ಲೂಕಿನ  ಸುನಗ ಗ್ರಾಮದಲ್ಲಿರುವ ಜಮೀನಿನ ನಕ್ಷೆ ನೀಡಲು ರೈತ ಅಣ್ಣೇಶಿ ಲಮಾಣಿ ಎಂಬುವವರಿಂದ ಮಹಾಂತೇಶ್ ಕವಳಿಕಟ್ಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಮೊದಲು 25 ಸಾವಿರ ರೂ. ಲಂಚ ಪಡೆದು ಕೆಲಸ ಮಾಡಿಕೊಟ್ಟಿರಲಿಲ್ಲ. ನಂತರ ಮತ್ತಷ್ಟು ಲಂಚಕ್ಕೆ ಬೇಡಿಕೆ ಇಟ್ಟು ಎಡಿಎಲ್ ಆರ್ ಕಚೇರಿಯಲ್ಲೇ 15 ಸಾವಿರ ರೂ. ಲಂಚ ಸ್ವೀಕರಿಸುವಾಗ ಸರ್ವೇಯರ್ ಮಹಾಂತೇಶ್ ಲೋಕಾಯಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ ಪಿ ಪುಷ್ಪಲತಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

Key words:  surveyor – Lokayukta- trap – accepting – bribe