ಟೆರರಿಸ್ಟ್ ಗಳ ಮಟ್ಟ ಹಾಕಿದ್ರೆ ಅದನ್ನು ನಂಬುವುದಿಲ್ಲ: ನಮ್ಮ ಸೈನಿಕರ ದಾಳಿಗಳನ್ನೆ ಅನುಮಾನದಲ್ಲಿ ನೋಡಿದ್ದಾರೆ:- ಪುಲ್ವಾಮ ದಾಳಿ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ವಿಚಾರ ಕುರಿತು ಸಚಿವ ಸಿ.ಟಿ ರವಿ ಕಿಡಿ…

ಮೈಸೂರು,ಫೆ,14,2020(www.justkannada.in): ಪುಲ್ವಾಮ ದಾಳಿ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ವಿಚಾರ ಕುರಿತು ಕಿಡಿಕಾರಿದ ಸಚಿವ ಸಿ.ಟಿ ರವಿ,  ಹೆತ್ತ ತಾಯಿಯನ್ನು ನಂಬಲಾಗದ ಸ್ಥಿತಿಗೆ ಅವರುಗಳು ಬಂದಿದ್ದಾರೆ.  ಟೆರರಿಸ್ಟ್ ಗಳ ಮಟ್ಟ ಹಾಕಿದ್ರೆ ಅದನ್ನು ನಂಬುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಮಾತನಾಡಿದ ಸಿ.ಟಿ ರವಿ, ಸರ್ಜಿಕಲ್ ಸ್ಟ್ರೈಕ್ ಅಂದ್ರೆ ಸೈನಿಕರನ್ನ ನಂಬಲ್ಲ. ಎಲೆಕ್ಷನ್ ಅಂದ್ರೆ ಇವಿಎಂ ನಂಬಲ್ಲ. ಅವರು ಯಾವ ದೇಶದ ನಾಯಕರು ಎಂಬುದೆ ಗೊತ್ತಿಲ್ಲ. ನಮ್ಮ ಸೈನಿಕರ ದಾಳಿಗಳನ್ನೆ ಅನುಮಾನದಲ್ಲಿ ನೋಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು

ಟಿಪ್ಪು ಬಗ್ಗೆ ಮೈಸೂರು ರಂಗಾಯಣ ನಿರ್ದೇಶಕರ ವಿವಾದಾತ್ಮಕ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಟಿಪ್ಪು ಬಗ್ಗೆ ನಾನೂ ಕೂಡಾ ಮಾತನಾಡಿದ್ದೀನಿ. ತಾಕತ್ತಿದ್ದರೆ ನನ್ನನ್ನೂ ವಜಾ ಮಾಡಿ ಅಂತ ಹೇಳಲಿ. ಟಿಪ್ಪು ಮತಾಂಧ, ಕೊಡವರ ಮೇಲೆ ದೌರ್ಜನ್ಯ ಮಾಡಿರುವುದು ಸತ್ಯ. ಮಲಬಾರಿಗಳ ಮೇಲೆ ಟಿಪ್ಪು ಹಾಗೂ ಆತನ ಸೈನಿಕರು ಅತ್ಯಾಚಾರ ಮಾಡಿರುವುದು ಸತ್ಯ. ಮಂಗಳೂರಿನಲ್ಲಿ ಕ್ರಿಶ್ಚಿಯನ್ನರು ಮೇಲೆ ದೌರ್ಜನ್ಯ ಮಾಡಿ ನೆತ್ತರು ಹರಿಸಿದ್ದ ಎಷ್ಟು ಸತ್ಯವ್ಯೋ. ಅಷ್ಟೇ ಸತ್ಯ ಬ್ರಿಟೀಷರ ವಿರುದ್ಧವೂ ಕೂಡಾ ಹೋರಾಟ ಮಾಡಿದ್ದ. ನಾವೂ ಎರಡೂ ಸತ್ಯಗಳನ್ನು ಹೇಳಬೇಕು. ಒಂದನ್ನು ಮಾತ್ರ ಹೇಳಿ ಇನ್ನೋಂದನ್ನು ಮರೆಮಾಚುವುದು ತಪ್ಪು. ಟಿಪ್ಪುವನ್ನು ಕನ್ನಡ ಪ್ರೇಮಿ ಎನ್ನುವುದು ಹಾಸ್ಯಾಸ್ಪದ ಸಂಗತಿ. ಪರ್ಶಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದವ ಕನ್ನಡ ಪ್ರೇಮಿ ಹೇಗಾಗ್ತಾನೆ..? ಎಂದು ಪ್ರಶ್ನಿಸಿದರು.

key words: Surgical Strike -soldiers- Rahul Gandhi’s- statement – Pulwama attack- mysore-Minister CT Ravi