ಮೀಸಲಾತಿ ಕುರಿತು ಸುಪ್ರೀಂ ತೀರ್ಪಿಗೆ ಅಸಮಾಧಾನ: ಸಾಮಾಜಿಕ ನ್ಯಾಯದ ಬಗ್ಗೆ ಕೇಂದ್ರಕ್ಕೆ ಕಾಳಜಿ ಇಲ್ಲ ಎಂದು ಕಿಡಿಕಾರಿದ ಮಾಜಿ ಸಿಎಂ ಸಿದ್ಧರಾಮಯ್ಯ…

ಬೆಂಗಳೂರು,ಫೆ,10,2020(www.justkannada.in): ಫೆಬ್ರವರಿ.7ರಂದು ಸುಪ್ರೀಂ ಪ್ರಕಟಿಸಿದ ತೀರ್ಪು ಆಘಾತ ತಂದಿದೆ. ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಬಡ್ತಿ ನೇಮಕಾತಿಯಲ್ಲಿ ಕಡ್ಡಾಯವಲ್ಲ ಎಂದಿದೆ. ಇದು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವಂತಹದ್ದು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ಧರಾಮಯ್ಯ,  ಫೆಬ್ರವರಿ.7ರಂದು ಸುಪ್ರೀಂ ಪ್ರಕಟಿಸಿದ ತೀರ್ಪು  ಎಸ್ ಸಿಎಸ್ ಟಿ ಹಿಂದೂಳಿದ ವರ್ಗಕ್ಕೆ ಆಘಾತ ತಂದಿದೆ.   ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ ಅನುಚ್ಛೇದ 16, 16ಎನಲ್ಲಿ ಮೀಸಲಾತಿ ಕಡ್ಡಾಯ ಎಂದು ಉಲ್ಲೇಖವಿದೆ. ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದ ಮೇಲೆ ನ್ಯಾಯಾಲಯಕ್ಕೆ ನ್ಯಾಯ ಕೇಳುವುದು ಹೇಗೆ..? ತಾರತಮ್ಯ ಸರಿಪಡಿಸುವುದು ಹೇಗೆ ಎಂದು ಪ್ರಶ್ನಿಸಿದರು.

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ ಮಾಜಿ ಸಿಎಂ ಸಿದ್ಧರಾಮಯ್ಯ, ಸುಪ್ರೀಂಕೋರ್ಟ್ ನಲ್ಲಿ ಸರಿಯಾಗಿ ವಾದ ಮಂಡಿಸಿಲ್ಲ ಅನ್ನಿಸುತ್ತೆ. ಇದು ಕೇಂದ್ರ ಸರ್ಕಾರದ ಹುನ್ನಾರ ಇರಬಹುದು. ಮೀಸಲಾತಿ ತೆಗೆಯಲು ಕೇಂದ್ರ ಸರ್ಕಾರ ನಿರಂತರ ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರಕ್ಕೆ ಸಾಮಾಜಿಕ ಕಾಳಜಿ ಇಲ್ಲ. ತೀರ್ಪಿನ ಎಳೆ ಇಟ್ಟುಕೊಂಡು ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲಿ ಮೀಸಲಾತಿ ರದ್ದು ಮಾಡಿದರೂ ಆಶ್ಚರ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಹಾಗಯೇ ಈ ಸಂಬಂಧ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸಾಮಾಜಿಕ ನ್ಯಾಯ ಎತ್ತಿಹಿಡಿಯಬೇಕು. ಇದರ ಬಗ್ಗೆ ಕೇಂದ್ರ ಆಸಕ್ತಿ ವಹಿಸದಿದ್ದರೇ ನಾವು ಜನಪರ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ. ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು. ಪ್ರಧಾನಿ ಮೋದಿ ಸರ್ವಪಕ್ಷ ಸಭೆ ಕರೆದು ಚರ್ಚಿಸಬೇಕು ಎಂದು ಆಗ್ರಹಿಸಿದರು.

Key words: Supreme Court – Judgment –reservation-   Former CM Siddaramaiah