ನವದೆಹಲಿ,ಜುಲೈ,24,2025 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ 7 ಆರೋಪಿಗಳ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಆದೇಶವನ್ನ ಸುಪ್ರೀಂಕೋರ್ಟ್ ಕಾಯ್ದಿರಿಸಿದೆ.
ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆ.ಬಿ ಪರ್ದೀವಾಲ ನೇತೃತ್ವದ ಪೀಠ ವಿಚಾರಣೆ ನಡೆಸಿತು. ಎರಡು ಕಡೆ ವಾದ ಆಲಿಸಿದ ನ್ಯಾಯಪೀಠ ಅಂತಿಮ ಆದೇಶವನ್ನ ಕಾಯ್ದಿರಿಸಿದ್ದು, ನಟ ದರ್ಶನ್ ಪರ ವಕೀಲರಿಗೆ ಒಂದು ವಾರದಲ್ಲಿ ಲಿಖಿತ ವಾದ ಸಲ್ಲಿಸಲು ಸೂಚನೆ ನೀಡಿತು. 3 ಪುಟದೊಳಗೆ ವಾದಾಂಶ ಸಲ್ಲಿಸಲು ಆದೇಶಿಸಿದೆ. 10ದಿನದ ಬಳಿಕವಷ್ಟೇ ಅರ್ಜಿ ಬಗ್ಗೆ ಅಂತಿಮ ತೀರ್ಪು ನೀಡುವುದಾಗಿ ನ್ಯಾಯಪೀಠ ತಿಳಿಸಿದೆ.
ಲಿಖಿತ ವಾದಾಂಶವನ್ನ ಸಲ್ಲಿಸಿದ ಬಳಿಕ ಸುಪ್ರೀಂಕೋರ್ಟ್ ಅದನ್ನ ಪರಿಶೀಲನೆ ನಡೆಸಿ ಅಂತಿಮ ತೀರ್ಪು ನೀಡಲಿದೆ. ಹೀಗಾಗಿ ನಟ ದರ್ಶನ್, ಪವಿತ್ರಗೌಡಗೆ 10 ದಿನಗಳ ಕಾಲ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
Key words: Supreme Court, bail cancellation, order, actor Darshan