ನವದೆಹಲಿ, ಮೇ,21,2025 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿಕೆ ಮಾಢಿದೆ.
ನಟ ದರ್ಶನ್ ಜಾಮೀನು ರದ್ದು ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ವಾದ ವಿವಾದ ಆಲಿಸಿ ಅರ್ಜಿ ವಿಚಾರಣೆಯನ್ನ ಮುಂದೂಡಿದೆ. ಬೇಸಿಗೆ ರಜೆ ಬಳಿಕ ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. ಜುಲೈ 14 ಕ್ಕೆ ಸುಪ್ರೀಂಕೋರ್ಟ್ ಗೆ ಬೇಸಿಗೆ ರಜೆ ಅಂತ್ಯವಾಗಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಿತ್ತು. ಜಾಮೀನು ಆದೇಶವನ್ನು ರದ್ದುಗೊಳಿಸುವಂತೆ ಪೊಲೀಸರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣ ಕುರಿತು ನಿನ್ನೆ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯ ವಿಚಾರಣೆಯನ್ನ ಜುಲೈ 10ಕ್ಕೆ ಮುಂದೂಡಿಕೆ ಮಾಡಿದ್ದು ಅಂದು ಎಲ್ಲಾ ಆರೋಪಿಗಳು ಹಾಜರಿರುವಂತೆ ಸೂಚನೆ ನೀಡಿತ್ತು.
Key words: actor Darshan, bail , Cancel, Supreme Court, adjourned, hearing