ಸೆ.28ರ ಕರ್ನಾಟಕ ಬಂದ್ ಗೆ ಜನಸಾಮಾನ್ಯರು ಬೆಂಬಲ ನೀಡಿ : ರೈತ ಮುಖಂಡ ಹೊಸಕೋಟೆ ಬಸವರಾಜು

ಮೈಸೂರು,ಸೆಪ್ಟೆಂಬರ್,26,2020(www.justkannada.in) : ಸರ್ಕಾರದ ವಿರುದ್ಧ ಸೆ.28ರಂದು ನಡೆಯುವ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಸೇರಿದಂತೆ ಜನಸಾಮಾನ್ಯರು ಬೆಂಬಲ ನೀಡಬೇಕು ಎಂದು ರೈತ ಮುಖಂಡ ಹೊಸಕೋಟೆ ಬಸವರಾಜು ಮನವಿ ಮಾಡಿದರು.jk-logo-justkannada-logo

ನಗರದ ಜಲದರ್ಶಿನಿ ಆವರಣದಲ್ಲಿ ಶನಿವಾರ ಕರ್ನಾಟಕ ಬಂದ್ ಸಂಬಂಧಿಸಿದಂತೆ ಸಭೆ ನಡೆಸಲಾಯಿತು.

ಈ ಸಂದರ್ಭ ರೈತ ಮುಖಂಡ ಹೊಸಕೋಟೆ ಬಸವರಾಜು ಮಾತನಾಡಿ, ಸೋಮವಾರ ಹಲವು  ಸಂಘಟನೆಗಳು ಬೀದಿಗಿಳಿಯುತ್ತವೆ. ಬೆಳಗ್ಗೆ ೬ ರಿಂದ  ಸಂಜೆ ೬ವರೆಗೂ ನಗರದಲ್ಲಿ ಬಂದ್ ಇರುತ್ತೆ. ಅಲ್ಲದೇ ತಾಲೂಕು ಕೇಂದ್ರಗಳಲ್ಕೂ ಪ್ರತಿಭಟನೆಗಳು ನಡೆಯುತ್ತದೆ. ಮಸೂದೆಯನ್ನು ಸರ್ಕಾರ  ವಾಪಸ್ ಪಡೆಯಲೇಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ನಿರಂತರವಾಗಿ ನಡೆಯುವುದು. ಬಂದ್ ಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದ್ದಾರೆ.

support-Karnataka-bund-September 28-Farmer-leader-Hoskote Basavaraju

ಸಭೆಯಲ್ಲಿ ಜಿಲ್ಲೆಯ 15ಕ್ಕೂ ಹೆಚ್ಚು ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.

key words : support-Karnataka-bund-September 28-Farmer-leader-Hoskote Basavaraju