ಬಿಜೆಪಿಗೆ ಬೆಂಬಲ: ನಟ ಸುದೀಪ್ ನಿರ್ಧಾರ ಸ್ವಾಗತಿಸುತ್ತೇನೆ- ಮಾಜಿ ಸಿಎಂ ಬಿಎಸ್ ವೈ.

ಬೆಂಗಳೂರು,ಏಪ್ರಿಲ್,6,2023(www.justkannada.in):  ಸಿಎಂ ಬಸವರಾಜ ಬೊಮ್ಮಾಯಿ ಪರ ನಟ ಕಿಚ್ಚ ಸುದೀಪ್ ಪ್ರಚಾರದ ನಿರ್ಧಾರವನ್ನ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸ್ವಾಗತಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ನಟ ಸುದೀಪ್ ನಿರ್ಧಾರವನ್ನ ಸ್ವಾಗತಿಸುತ್ತೇನೆ. ನಟ ಸುದೀಪ್ ಪ್ರಚಾರ ವಿಚಾರದಲ್ಲಿ ಕಾಂಗ್ರೆಸ್ ಲೇವಡಿ  ಮಾಡುತ್ತಿದೆ.  ಕಾಂಗ್ರೆಸ್ ನವರಿಗೆ ತಲೆಕೆಟ್ಟು ಏನು ಬೇಕಾದರೂ ಮಾತನಾಡುತ್ತಾರೆ. ನಟ ಸುದೀಪ್ ಬಿಹೆಪಿಗೆ ಬೆಂಬಲ ನೀಡುತ್ತೇನೆ ಅಂತ ಹೇಳಿದ್ದಾರೆ. ನಮಗೆ ಸಿಗುತ್ತಿರುವ ಬೆಂಬಲವನ್ನ ಕಾಂಗ್ರೆಸ್ ನವರಿಗೆ  ಸಹಿಸೋಕೆ ಆಗುತ್ತಿಲ್ಲ ಎಂದು ಟಾಂಗ್ ನೀಡಿದರು.

ವರುಣಾ ಕ್ಷೇತ್ರದಿಂದ ಸಚಿವ ವಿ. ಸೋಮಣ್ಣ ಸ್ಪರ್ಧೆ ವಿಚಾರ  ಈ ಬಗ್ಗೆ ಹೈಕಮಾಂಡ್ ಏನು ಹೇಳುತ್ತದೂ ಅದೇ ಫೈನಲ್ ಆಗಲಿದೆ. ನಾಳೆ ಅಭ್ಯರ್ಥಿಗಳ ಪಟ್ಟಿ ಹೈಕಮಾಂಢ್ ಗೆ ಕಳಿಸಲಾಗುತ್ತದೆ ಎಂದು ಬಿ ಎಸ್ ಯಡಿಯೂರಪ್ಪ ತಿಳಿಸಿದರು.

Key words: Support – BJP-welcome- actor -Sudeep’s –decision- Former CM -B.S.Yeddyurappa