Saturday, August 22, 2026

BDA Apartments

Home Front Page ಸಪ್ಲೇಯರ್ ಮೇಲೆ ಹಲ್ಲೆ ಆರೋಪ ವಿಚಾರ:  ನಟ ದರ್ಶನ್ ಪರ ಬ್ಯಾಟ್  ಬೀಸಿದ ಸಚಿವ ಬಿ.ಸಿ...

ಸಪ್ಲೇಯರ್ ಮೇಲೆ ಹಲ್ಲೆ ಆರೋಪ ವಿಚಾರ:  ನಟ ದರ್ಶನ್ ಪರ ಬ್ಯಾಟ್  ಬೀಸಿದ ಸಚಿವ ಬಿ.ಸಿ ಪಾಟೀಲ್.

ಬೆಂಗಳೂರು,ಜುಲೈ,16,2021(www.justkannada.in):  ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನ ಸಪ್ಲೇಯರ್ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪರ ಕೃಷಿ ಸಚಿವ ಬಿ.ಸಿ ಪಾಟೀಲ್ ಬ್ಯಾಟ್ ಬೀಸಿದ್ದಾರೆ.jk

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಬಿ.ಸಿ ಪಾಟೀಲ್,  ನಟ ದರ್ಶನ್ ಒಳ್ಳೆಯ ವ್ಯಕ್ತಿ. ಬಹಳ ಮುಗ್ದ, ಯಾವುದೇ ಕೆಟ್ಟ ಕೆಲಸ ಮಾಡಲ್ಲ. ದರ್ಶನ್ ಕಷ್ಟದಿಂದ ಬೆಳೆದು ಈ ಮಟ್ಟಕ್ಕೆ ಬಂದಿದ್ದಾರೆ. ಚಿತ್ರರಂಗದಲ್ಲಿ ಹೊಸಬರನ್ನ ಪ್ರೋತ್ಸಾಹಿಸುತ್ತಾರೆ ಎಂದರು.

ನಟ ದರ್ಶನ್ ಏಳಿಗೆ ಸಹಿಸಲಾರದವರು ದುರುದ್ದೇಶದಿಮದ ಕೇಸ್ ಹಾಕಿಸಿ ಆರೋಪ ಮಾಡುತ್ತಿದ್ದಾರೆ. ನಟ ದರ್ಶನ್ ತೇಜೋವಧೆ ಮಾಡಲು ಯತ್ನಿಸಲಾಗುತ್ತಿದೆ ಎಂದು ಸಚಿವ ಬಿ.ಸಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.

 ಇನ್ನು ಕೃಷಿ ಇಲಾಖೆ ರಾಯಭಾರಿ ಸ್ಥಾನದಿಂದ ದರ್ಶನ್ ಅವರನ್ನು ಕೈ ಬಿಡುವುದಿಲ್ಲ. ರಾಯಭಾರ ಸ್ಥಾನದಿಂದ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು  ಸಚಿವ ಬಿ.ಸಿ ಪಾಟೀಲ್ ಸ್ಪಷ್ಟಪಡಿಸಿದರು.

Key words: Supplier – assault-Actor –Darshan­-minister- B CPatil,