ವಿಧಾನಸಭೆಯಲ್ಲಿ ಪೂರಕ ಬಜೆಟ್ ಗೆ ಅನುಮೋದನೆ ಮತ್ತು  ಧನವಿನಿಯೋಗ ವಿಧೇಯಕ ಅಂಗೀಕಾರ….

ಬೆಂಗಳೂರು,ಜು,29,2019(www.justkannada.in): ವಿಧಾನಸಭೆಯಲ್ಲಿ ಇಂದು ಸಿಎಂ ಬಿ.ಎಸ್​. ಯಡಿಯೂರಪ್ಪ ವಿಶ್ವಾಸ ಮತ ಗೆದ್ದ ಬಳಿಕ ಮಂಡನೆಯಾದ ಧನವಿನಿಯೋಗ ವಿಧೇಯಕ, ವಿಧಾನಸಭೆಯಲ್ಲಿ ಯಾವುದೇ ಚರ್ಚೆ ಇಲ್ಲದೇ ಅಂಗೀಕಾರವಾಯಿತು.

ವಿಧಾನಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ಧನ ವಿನಿಯೋಗ ವಿಧೇಯಕ ಮಂಡನೆ ಮಾಡಿದರು. ಮುಂದಿನ ಮೂರು ತಿಂಗಳಿಗೆ ಲೇಖಾನುದಾನಕ್ಕೆ ಅಂಗೀಕಾರವಾಯಿತು. ಇದೇ ವೇಳೆ ಮಾತನಾಡಿದ  ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಅವರು 3 ತಿಂಗಳಿಗೆ ಲೇಖಾನುಧಾನ ಮಾಡಿರುವುದು ಸರಿಯಲ್ಲ ಅಂತ ವಿರೋಧ ವ್ಯಕ್ತಪಡಿಸಿದರು. ಕೊನೆಗೆ ಯಾವುದೇ ಚರ್ಚೆ ಇಲ್ಲದೇ ವಿಧಾಸಭೆಯಲ್ಲಿ ‘ಧನ ವಿನಿಯೋಗ ವಿಧೇಯಕ’ ಅಂಗೀಕಾರ ಮಾಡಲಾಯಿತು.

ಹಾಗೆಯೇ ಸದನದಲ್ಲಿ ಪೂರಕ ಬಜೆಟ್ ಮಂಡನೆ ಮಾಡಿ ಸಿಎಂ ಬಿಎಸ್ ಯಡಿಯೂರಪ್ಪ ಒಪ್ಪಿಗೆ ಪಡೆದರು. ಯಾವುದೇ ಚರ್ಚೆ ಇಲ್ಲದೆ ಪೂರಕ ಬಜೆಟ್ ಮಂಡನೆಗೆ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ,  ಚರ್ಚೆ ಇಲ್ಲದೆ ಪೂರಕ ಬಜೆಟ್ ಅನುಮೋದನೆ ಸಾಧ್ಯವಿಲ್ಲ.  ಕಣ್ಣುಮುಚ್ಚಿಕೊಂಡು  ಪೂರಕ ಬಜೆಟ್ ಗೆ ಅನುಮೋದನೆ ಸಾಧ್ಯವಿಲ್ಲ ಚರ್ಚೆ ಇಲ್ಲದೆ ಪೂರಕ ಬಜೆಟ್ ಹೇಗೆ ಮಂಡಿಸುತ್ತಾರೆ ಎಂದು ಪ್ರಶ್ನಿಸಿದರು. ವಿರೋಧ ಪಕ್ಷಗಳ ವಿರೋಧದ ನಡುವೆ ಪೂರಕ ಬಜೆಟ್ ಗೆ ಅನುಮೋದನೆ ದೊರೆಯಿತು.

Key words: Supplemental Budget – Financial –Subordinate- Acceptance-legislative assembly