ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್’ನಲ್ಲಿ ಚಿನ್ನ ಗೆದ್ದ ಸುನಿಲ್ ಕುಮಾರ್

ಬೆಂಗಳೂರು, ಫೆಬ್ರವರಿ 19, 2020 (www.justkannada.in): ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನ ಗ್ರಿಕೊ-ರೋಮನ್ ವಿಭಾಗದಲ್ಲಿ ಭಾರತದ ಸುನಿಲ್ ಕುಮಾರ್ ಅವರು ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

87 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿದ್ದ ಸುನಿಲ್ ಅವರು ಕಿರ್ಗಿಸ್ಥಾನದ ಅಜತ್ ಸಲಿದಿನೋವ್ ಅವರನ್ನು 5-0 ಅಂತರದಿಂದ ಸುಲಭವಾಗಿ ಮಣಿಸಿ ಚಿನ್ನ ಗೆದ್ದಿದ್ದಾರೆ. ಸತತ ಎರಡನೇ ಬಾರಿ ಫೈನಲಿಗೇರಿದ ಸಾಧನೆ ಮಾಡಿದ್ದ ಸುನಿಲ್ ಈ ಬಾರಿ ಚಿನ್ನಕ್ಕೆ ಮುತ್ತಿಟ್ಟರು.

ಭಾರತದ ಮತ್ತೋರ್ವ ಕುಸ್ತಿಪಟು ಅರ್ಜುನ್ ಹಲಕುರ್ಕಿ ಅವರು 55 ಕೆ.ಜಿ ವಿಭಾಗದಲ್ಲಿ ಕಂಚು ಜಯಿಸಿದ್ದಾರೆ. ಇರಾನ್ ನ ನಾಸೆರ್ ಪೌರ್ ವಿರುದ್ಧ 7-8 ಅಂಕಗಳಿಂದ ಸೆಮಿಫೈನಲ್ ನಲ್ಲಿ ಸೋಲನುಭವಿಸಿದರು.