Monday, September 14, 2026

BDA Apartments

ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಘೋಷಿಸಿದ ‘ಫುಟ್ಬಾಲ್ ಸ್ಟಾರ್’ ಸುನಿಲ್...
Home Front Page ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಘೋಷಿಸಿದ ‘ಫುಟ್ಬಾಲ್ ಸ್ಟಾರ್’ ಸುನಿಲ್ ಚೇಟ್ರಿ

ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಘೋಷಿಸಿದ ‘ಫುಟ್ಬಾಲ್ ಸ್ಟಾರ್’ ಸುನಿಲ್ ಚೇಟ್ರಿ

ಬೆಂಗಳೂರು, ಮೇ 16, 2024 (www.justkannada.in): ಭಾರತದ ಖ್ಯಾತ ಫುಟ್ಬಾಲ್ ಆಟಗಾರ ಸುನಿಲ್ ಚೇಟ್ರಿ ಅಂತರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಘೋಷಿಸಿದ್ದಾರೆ.

ಜೂನ್ 6ರಂದು ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಕುವೈಟ್ ನಡುವೆ ಪಂದ್ಯ ನಡೆಯಲಿದ್ದು, ಇದರಲ್ಲಿ ಸುನಿಲ್ ಚೇತ್ರಿ ಆಡಲಿದ್ದಾರೆ. ಆ ಬಳಿಕ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ಚೇಟ್ರಿ ತಿಳಿಸಿದ್ದಾರೆ.

ಈ ಮೂಲಕ ಜೂನ್ 6 ರಂದು ಕುವೈತ್ ವಿರುದ್ಧ ನಡೆಯಲಿರುವ ಪಂದ್ಯ ತನ್ನ ಕೊನೆ ಅಂತಾರಾಷ್ಟ್ರೀಯ ಪಂದ್ಯ ಎಂದು ತಿಳಿಸಿದ್ದಾರೆ.

ಭಾರತ ಫುಟ್ಬಾಲ್ ತಂಡದಲ್ಲಿ ಸ್ಟಾರ್ ಆಟಗಾರರಾಗಿದ್ದ ಸುನಿಲ್ ಚೇಟ್ರಿ, ತಂಡದ ಗೆಲುವಿನ ಪ್ರಮುಖ ಕಾರಣಕರ್ತರಾಗಿದ್ದರು.