ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಸುಮಲತಾ! ಕನ್ನಡಿಗರಾಗಿ ‘ಕ್ರೇಜಿಸ್ಟಾರ್’

ಬೆಂಗಳೂರು, ಅಕ್ಟೋಬರ್ 27, 2020 (www.justkannada.in): ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರು ಬಿ.ಎಂ. ಗಿರಿರಾಜ್ ನಿರ್ದೇಶನದ ಕನ್ನಡಿಗ ಚಿತ್ರದಲ್ಲಿ ನಟಿಸಲಿದ್ದಾರೆ.

ವಿಶೇಷ ಅಂದರೆ ಈ ಸಿನಿಮಾದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಪ್ರಮುಖ ಪಾತ್ರ ನಟಿಸಲಿರುವರು.  ನಟಿ ಭಾವನಾ ಕೂಟ ಈ ಸಿನಿಮಾದಲ್ಲಿರುವರು. ಇದು ನನ್ನ ರೀತಿಯ ಸಿನಿಮಾವಲ್ಲ, ನಾನು ಸಂಪೂರ್ಣ ಕಥೆ ಕೇಳಲ್ಲ. ಆದರೆ ಗಿರಿರಾಜ್ ಕನಸಿನ ಬಗ್ಗೆ ತಿಳಿದಿದೆ. ಇದರಿಂದ ಸಿನಿಮಾಗೆ ಒಪ್ಪಿಕೊಂಡೆ. ನಟನಾದವನು ಎಲ್ಲಾ ರೀತಿಯ ಸಿನಿಮಾಗಳಲ್ಲಿ ನಟಿಸಬೇಕು ಎಂದು ರವಿಚಂದ್ರನ್ ತಿಳಿಸಿದ್ದಾರೆ.

ಕನ್ನಡಿಗ ಸಿನಿಮಾದ ಹೆಸರನ್ನು ನಾನು ನೋಂದಾಣಿ ಮಾಡಿದ್ದೆ. ಆದರೆ ಇದನ್ನು ನಾನೀಗ ಗಿರಿರಾಜ್ ಅವರಿಗೆ ನೀಡಿದ್ದೇನೆ ಎಂದಿದ್ದಾರೆ ಕ್ರೇಜಿಸ್ಟಾರ್.