‘ರಾಜ ವೀರ ಮದಕರಿ ನಾಯಕ ‘ ನಾಯಕನಿಗೆ ಸುಮಲತಾ ರಾಜಮಾತೆ!

ಬೆಂಗಳೂರು, ಮಾರ್ಚ್ 03, 2020 (www.justkannada.in): ‘ರಾಜ ವೀರ ಮದಕರಿ ನಾಯಕ ‘ ಚಾಲೆಂಜಿಂಗ್ ‌ ಸ್ಟಾರ್ ‌ ದರ್ಶನ್ ಅಭಿನಯದ ಮತ್ತೊಂದು ಐತಿಹಾಸಿಕ ಚಿತ್ರ. ಇದರಲ್ಲಿ ಸಂಸದೆ ಸುಮಲತಾ ಕೂಡ ನಟಿಸಲಿದ್ದಾರೆ.

ಹೌದು. ಎರಡನೇ ಹಂತದ ಶೂಟಿಂಗ್’ನಲ್ಲಿ ಸಂಸದೆ ಸುಮಲತಾ ಅಂಬರೀಶ್ ‌ಭಾಗಿಯಾಗಲಿದ್ದಾರೆ. ರಾಜಮಾತೆ ಪಾತ್ರದಲ್ಲಿ ಕಾಣಿಸಿಕೊಳ್ತಿರೋ ಸುಮಲತಾ ಅಂಬರೀಶ್ ‌ ಸದ್ಯದಲ್ಲಿಯೇ ಚಿತ್ರತಂಡ ಸೇರ್ಪಡೆಯಾಗಲಿದ್ದಾರೆ.

ಸದ್ಯ ಹೈದರಾಬಾದ್ ‌ ನ ರಾಮೋಜಿ ಫಿಲ್ಮ್ ‌ ಸಿಟಿಯಲ್ಲಿ ಶೂಟಿಂಗ್ ನಡೆಯಲಿದ್ದು , ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಪಿ ರವಿಶಂಕರ್ ಮತ್ತು ದೊಡ್ಡಣ್ಣ ಅಭಿನಯಿಸಲಿದ್ದಾರೆ .

ಉಳಿದ ತಾರಾ ಬಳಗವನ್ನ ಸದ್ಯದಲ್ಲಿಯೇ ಚಿತ್ರತಂಡ ರಿವೀಲ್ ಮಾಡಲಿದೆ. 10 ದಿನ ಕೇರಳದಲ್ಲಿ ಶೂಟಿಂಗ್ ಮುಗಿಸಿರೋ ಚಿತ್ರತಂಡ , ಈಗ ಹೈದರಾಬಾದ್ ‌ ನಲ್ಲಿ ಬಿಡುಬಿಟ್ಟಿದೆ .