ಸುಮಲತಾ ಅಂಬರೀಶ್ ನಟೋರಿಯಸ್ : ಅವರ ಬಗ್ಗೆ ನನ್ನ ಬಳಿ ದಾಖಲೆಗಳಿವೆ- ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಶಾಸಕ.

ಮಂಡ್ಯ,ಜುಲೈ,8,2021(www.justkannada.in): ಸುಮಲತರದ್ಧು ನಟೋರಿಯಸ್ ಬಿಹೇವಿಯರ್.  ನಟೋರಿಯಸ್ ಅನ್ನೋ ಪದ ಅವರಿಗೆ ಬಳಸಬಹುದು.  ಸುಮಲತಾ ಅಂಬರೀಶ್ ಬಗ್ಗೆ ದಾಖಲೆಗಳಿವೆ. ಸಂದರ್ಭ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಹೊಸ ಬಾಂಬ್ ಸಿಡಿಸಿದರು.jk

ಕೆಆರ್ ಎಸ್ ಡ್ಯಾಂಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಕೆಆರ್ ಎಸ್ ಜಲಾಶಯದಲ್ಲಿ ಸಣ್ಣ ಬಿರುಕು ಸಹ ಬಿಟ್ಟಿಲ್ಲ. ನಮಗೆ ಕಾಣಿಸದ ಬಿರುಕು ಅವರಿಗೆಲ್ಲಿ ಕಾಣಿಸಿತ್ತೋ ಗೊತ್ತಿಲ್ಲ. ನಾನು ಮೊದಲಿನಿಂದಲೂ ಡ್ಯಾಂ ಸುರಕ್ಷತೆವಾಗಿದೆ ಅಂತ ಹೇಳುತ್ತಲೇ ಇದ್ದೇನೆ. ಸುಮಲತಾ ಅವರು ಬಿರುಕು ಇದೆ ಅಂತ ಯಾವ ಆಧಾರದ ಮೇಲೆ ಹೇಳುತ್ತಿದ್ದಾರೆ ? ದೇಶದ ಗೌಪ್ಯತೆ ಕಾಪಾಡುತ್ತೇನೆ ಅಂತ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ನ್ಯಾಷನಲ್ ಪ್ರಾಪರ್ಟಿ ಬಗ್ಗೆ ಅದ್ಹೇಗೆ ಬಹಿರಂಗ ಹೇಳಿಕೆ ನೀಡುತ್ತೀರಿ ? ನಿಮ್ಮ ಹೇಳಿಕೆಯನ್ನು ಆ್ಯಂಟಿ ಎಲಿಮೆಂಟ್‌ ಗಳು ದುರ್ಬಳಕೆ ಮಾಡಿಕೊಳ್ಳಲ್ವ ? ನೀವು ದೇಶ ದ್ರೋಹ ಮಾಡಿದ್ದೀರಿ.  ಸಿನಿಮಾದವರು ಯಾವ ವಿಚಾರವನ್ನು ಹೇಗೆ ಬೇಕಾದರೂ ತಿರುಚಿ ಮಾತನಾಡಬಹುದು. ಆದರೆ ಡ್ಯಾಂ ಸುರಕ್ಷತೆ ಬಗ್ಗೆ ಹೇಳಿಕೆ ನೀಡುವ ಅಧಿಕಾರವನ್ನು ನಿಮಗೆ ಕೊಟ್ಟವರು ಯಾರು ? ನೀವೇನ್ ಪ್ರಧಾನ ಮಂತ್ರಿನಾ, ಮುಖ್ಯಮಂತ್ರಿನಾ ? ಎಂದು ವಾಗ್ದಾಳಿ ನಡೆಸಿದರು.

ಸುಮಲತಾ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಸಂದರ್ಭ ಬಂದಾಗ ಬಿಡುಗಡೆ ಮಾಡುತ್ತೇನೆ. ನಿಮ್ಮ ಎಡಬಲದಲ್ಲಿ ಇದ್ದವರನ್ನು ಹೋಟೆಲ್‌ ಗೆ ಯಾಕೆ ಕಳುಹಿಸಿದ್ರಿ ? ಬೆಂಗಳೂರಿನ ಸ್ಟಾರ್ ಹೋಟೆಲ್‌ ನಲ್ಲಿ ಯಾರ ಜೊತೆಗೆ ನಿಮ್ಮ ಬ್ರೋಕರ್‌ ಗಳು ಏನು ಮಾತನಾಡಿದ್ರು ಅಂತ ಗೊತ್ತಿದೆ. ನನ್ನ ಬಳಿಯೂ ದಾಖಲೆಗಳಿವೆ, ಮುಂದಿನ ದಿನಗಳಲ್ಲಿ ನಾನೂ ಮಾತನಾಡುತ್ತೇನೆ ಎಂದು ರವೀಂದ್ರ  ಶ್ರೀಕಂಠಯ್ಯ ಟಾಂಗ್ ನೀಡಿದರು.

 ಅಕ್ರಮ ನಡೆದಿದ್ದು ಅಂಬರೀಶ್ ಕಾಲದಲ್ಲಿ.

ಅಂಗರಹಳ್ಳಿಯಲ್ಲಿ ಅಕ್ರಮ ಗಣಿಗಾರಿಕೆ ಆಗಿರೋದು ಅಂಬರೀಶ್ ಸಂಸದರಾಗಿದ್ದ ಕಾಲದಲ್ಲಿ. 2007ರವರೆಗೂ ಅಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆದಿದೆ.  ಅಕ್ರಮವಾಗಿ ಗಣಿ ಮಾಡಿದವರು ಅಂಬರೀಶ್ ಬೆಂಬಲಿಗರು. ಸಂಸದರಾಗಿದ್ದ ಅಂಬರೀಶ್ ಅಲ್ಲಿಗೆ ಭೇಟಿ ನೀಡಿ ಹಳ್ಳಕೊಳ್ಳಗಳನ್ನೂ ಪರಿಶೀಲಿಸಿದ ವಿಡಿಯೋ ನನ್ನ ಬಳಿ ಇದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ಶಾಸಕರೋ ಭಯೋತ್ಪಾದಕರೋ ಎಂಬ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ನೀವು ಸಿನಿಮಾದವರು. ಯಾವ ವಿಚಾರವನ್ನು ಬೇಕಾದರೂ ನಿಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚುತ್ತೀರಿ ಎಂದು ಟಾಂಗ್ ನೀಡಿದರು.

ಜೆಡಿಎಸ್‌ನಲ್ಲೂ ರಾಜಕೀಯ ಮಿಸೈಲ್‌ ಗಳಿವೆ. ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ನಮ್ಮ ಮಿಸೈಲ್.  ಇಂತಹ ಹಲವು ಮಿಸೈಲ್ ನಮ್ಮ ಪಕ್ಷದಲ್ಲಿವೆ. ಸಂದರ್ಭ ಬಂದಾಗ ಪ್ರಯೋಗ ಮಾಡುತ್ತೇವೆ ಅಂತ ಹೇಳಿದ್ದೆ. ಅದನ್ನೇ ಸುಮಲತಾ ತಮ್ಮ ಅನುಕೂಲಕ್ಕೆ ತಿರುಚಿಕೊಂಡಿದ್ದಾರೆ. ಇಷ್ಟು ನಟೋರಿಯಸ್ ಬುದ್ದಿ ಇರುವವರಿಗೆ ಏನು ಹೇಳೋದು ? ಎಂದು ಕಿಡಿಕಾರಿದರು.

Key words: Sumalatha Ambarish –Notorious-documents- new bomb-JDS MLA- ravindra Shrikantaiah