ಸುಮಲತಾ ಅಂಬರೀಶ್ ಗೆಲ್ಲುತ್ತಾರೆ ಅಂತಾ ಮೊದಲೇ ತಿಳಿದಿತ್ತು- ಜೆಡಿಎಸ್ ಎಂಎಲ್ ಸಿ ಸಂದೇಶ್ ನಾಗರಾಜ್….

ಮಂಡ್ಯ,ಮೇ,27,2019(www.justkannada.in):  ಮಂಡ್ಯ ಲೋಕಸಭಾ  ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್ ಗೆಲ್ಲುತ್ತಾರೆಎಂದು ಮೊದಲೇ  ತಿಳಿದಿತ್ತು ಅಂತಾ ಜೆಡಿಎಸ್ ಎಂಎಲ್ ಸಿ ಸಂದೇಶ್ ನಾಗರಾಜ್ ಹೇಳಿದ್ದಾರೆ.

ಮಂಡ್ಯದ ಮದ್ದೂರಿನಲ್ಲಿ ಇಂದು ಮಾತನಾಡಿದ ಸಂದೇಶ್ ನಾಗರಾಜ್, ಆರಂಭದಿಂದಲೂ ಸುಮಲತಾ ಗೆಲ್ಲುತ್ತಾರೆ ಎಂದು ತಿಳಿದಿತ್ತು. ಕಡಿಮೆ ಎಂದರೂ 1 ಲಕ್ಷ ಮತಗಳ ಅಂತರದಿಂದ ಗೆಲ್ತಾರೆ ಎಂದು ಹೇಳಿದ್ದೆ. ಅದರಂತೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸುಮಲತಾ ಗೆಲುವು ಸಾಧಿಸಿದ್ದಾರೆ  ಎಂದು ತಿಳಿಸಿದರು.

ಇನ್ನು ನಿಖಿಲ್ ಮಂಡ್ಯದಲ್ಲಿ ಎರಡೂವರೆ ಲಕ್ಷ ಮತಗಳಿಂದ ಸೋತರೆ  ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ.ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದು ಸಚಿವರೊಬ್ಬರು ಹೇಳಿದ್ದರು.  ಅವರು ಕೊಟ್ಟ ಮಾತಿನಂತೆ ನಡೆದುಕೊಳ್ತಾರೋ ಇಲ್ಲವೋ  ಸಚಿವರು ಸುಳ್ಳು ಹೇಳಿದರೇ  ಜನತೆಗೆ ಸುಳ್ಳುಹೇಳಿದಂತೆ ಎಂದು ಸಂದೇಶ್ ನಾಗರಾಜ್ ಟಾಂಗ್ ಕೊಟ್ಟರು.

Key words: Sumalatha Ambarish knew beforehand that would win-JDS MLC Sandesh Nagaraj

#Mandya #SumalathaAmbarish #SandeshNagaraj