ತೆಲುಗಿನ ಜನಪ್ರಿಯ ಕಿರುತೆರೆ ನಟಿ ಆತ್ಮಹತ್ಯೆ

ಹೈದರಾಬಾದ್, ಸೆಪ್ಟೆಂಬರ್ 09, 2020 (www.justkannada.in): ತೆಲುಗು ಜನಪ್ರಿಯ ಕಿರುತೆರೆ ನಟಿ ಶ್ರಾವಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೈದರಾಬಾದ್​ನ ಎಸ್​.ಆರ್​. ನಗರದ ಮಧುರಾ ನಗರದಲ್ಲಿ ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಂಧ್ರ ಪ್ರದೇಶದ ಕಾಕಿನಾಡ ಮೂಲದ ಶ್ರಾವಣಿ ಹೈದರಾಬಾದ್​ನದಲ್ಲಿ ವಾಸಿಸುತ್ತಿದ್ದರು. ‘ಮನಸು ಮಮತ’ ಹಾಗೂ ‘ಮೌನರಾಗಂ’ ಧಾರಾವಾಹಿ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು.

ಕೆಲವು ದಿನಗಳ ಹಿಂದೆ ಟಿಕ್​ಟಾಕ್​ನಲ್ಲಿ ಪರಿಚಯವಾದ ದೇವರಾಜು ರೆಡ್ಡಿ ಪ್ರೀತಿಯ ನಾಟಕವಾಡಿ, ಖಾಸಗಿ ಪೋಟೋ ತೆಗೆದು ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ನೀಡಿ ಹಣಕ್ಕಾಗಿ ಪೀಡಿಸುತ್ತಿದ್ದನು ಎಂದು ಶ್ರಾವಣಿ ಎಸ್.ಆರ್. ನಗರದಲ್ಲಿ ದೂರು ನೀಡಿದ್ದಳು ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.