ಮಂಗಳೂರು,ಮೇ,2,2025 (www.justkannada.in): ಮಂಗಳೂರಿನ ಬಜ್ಪೆ ಕಿನ್ನಿಪದವು ಬಳಿ ನಿನ್ನೆ ಸುಹಾಸ್ ಶೆಟ್ಟಿ ಎಂಬ ಹಿಂದೂ ಕಾರ್ಯಕರ್ತನ ಹತ್ಯೆಯಾಗಿದ್ದು, ಸುಹಾಸ್ ಶೆಟ್ಟಿಯ ಹಿನ್ನೆಲೆಯ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಮೃತ ಸುಹಾಸ್ ಶೆಟ್ಟಿ ಓರ್ವ ರೌಡಿ ಶೀಟರ್. ಸುಹಾಸ್ ಶೆಟ್ಟಿ ಮೇಲೆ 5 ಪ್ರಕರಣಗಳಿವೆ. 2022ರಲ್ಲಿ ನಡೆದ ಫಾಜಿಲ್ ಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದಾರೆ. ಹಾಗೆಯೇ ಇದಕ್ಕಿಂತ ಮುಂಚೆ ಕೀರ್ತಿ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ. ಜೊತೆಗೆ ಅವರ ಮೇಲೆ ಕೊಲೆ ಯತ್ನ ಪ್ರಕರಣ ಇದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್ ನ ಫಾಜಿಲ್ ಎಂಬುವವರ ಕೊಲೆಯಾಗಿತ್ತು. ಇದೀಗ ಇದಕ್ಕೆ ಪ್ರತಿಕಾರವಾಗಿ ಸುಹಾಸ್ ಶೆಟ್ಟಿಯನ್ನ ಹತ್ಯೆಗೈಯಲಾಗಿದೆ ಎಂದು ಹೇಳಲಾಗುತ್ತಿದೆ.
Key words: Suhas Shetty, rowdy sheeter, Mangalore Police Commissioner