ಬೆಳಗಾವಿ,ನವೆಂಬರ್,8,2025 (www.justkannada.in): ಪ್ರತಿಟನ್ ಕಬ್ಬಿಗೆ 3300 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹಿನ್ನೆಲೆಯಲ್ಲಿ ಬೆಳಗಾವಿ ಗುರ್ಲಾಪುರದಲ್ಲಿ ರೈತರು ನಡೆಸುತ್ತಿದ್ದ ಹೋರಾಟವನ್ನ ಹಿಂಪಡೆದು ಸಂಭ್ರಮನಿಸಿದ್ದಾರೆ.
ಕಬ್ಬಿಗೆ 3500 ರೂ. ನಿಗದಿಗೆ ಆಗ್ರಹಿಸಿ ಕಬ್ಬುಬೆಳಗಾರರು ಬೃಹತ್ ಹೋರಾಟ ನಡೆಸಿದ್ದು ರೈತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ನಿನ್ನೆ ಸಭೆ ನಡೆಸಿ ಪ್ರತಿಟನ್ ಕಬ್ಬಿಗೆ 3300 ರೂಪಾಯಿ ನೀಡುವುದಾಗಿ ಘೋಷಿಸಿತ್ತು. ಇದೀಗ ಇಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಬೆಳಗಾವಿ ಗುರ್ಲಾಪುರದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತೆರಳಿ ರೈತ ಮುಖಂಡ ಚೂನಪ್ಪ ಪೂಜಾರಿ ಅವರುಗೆ ಸರ್ಕಾರದ ಆದೇಶ ಪತ್ರ ನೀಡಿದರು. ಕಬ್ಬು ಬೆಳೆಗೆ ಬೆಲೆ ನಿಗದಿಗೆ ಸರ್ಕಾರ ಒಪ್ಪಿದ್ದು, ಹೋರಾಟ ಕೈಬಿಡುವಂತೆ ಮನವ ಮಾಡಿದರು. ಸರ್ಕಾರದ ಆದೇಶ ಪ್ರತಿ ಸಿಗುತ್ತಿದಂತೆಯೇ ಕಬ್ಬು ಬೆಳೆಗಾರರು ಪ್ರತಿಭಟನೆ ಹಿಂಪಡೆದು ಸಂಭ್ರಮಾಚರಿಸಿದರು.
ಬಾಗಲಕೋಟೆಯಲ್ಲಿ ಮುಂದುವರೆದ ಪ್ರತಿಭಟನೆ
ಪ್ರತಿಟನ್ ಕಬ್ಬಿಗೆ 3300 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿ 3,500 ರೂ ನಿಗದಿ ಮಾಡಲೇಬೇಕೆಂದು ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ.
ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದು, ಸ್ಥಳದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ರೈತರು ಸೇರಿದ್ದಾರೆ. ಪ್ರತಿ ಟನ್ ಕಬ್ಬಿಗೆ 3500 ರೂ ಮತ್ತು ಬಾಕಿ ನೀಡುವಂತೆ ಒತ್ತಾಯ ಮಾಡಿದ್ದಾರೆ.
Key words: Sugarcane price, fixing, Farmers, celebrate,







