Wednesday, July 29, 2026

BDA Apartments

Home Front Page ಅನುದಾನ ವಿಚಾರ: ಮಾಜಿ ಸಿಎಂ ಸಿದ್ಧರಾಮಯ್ಯಗೆ ಟಾಂಗ್ ಕೊಟ್ಟ ಅನರ್ಹ ಶಾಸಕ ಡಾ.ಸುಧಾಕರ್…

ಅನುದಾನ ವಿಚಾರ: ಮಾಜಿ ಸಿಎಂ ಸಿದ್ಧರಾಮಯ್ಯಗೆ ಟಾಂಗ್ ಕೊಟ್ಟ ಅನರ್ಹ ಶಾಸಕ ಡಾ.ಸುಧಾಕರ್…

ಚಿಕ್ಕಬಳ್ಳಾಪುರ,ನ,1,2019(www.justkannada.in):  ಅನರ್ಹ ಶಾಸಕರ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದೆ ಎಂದು ಆರೋಪಿಸಿದ್ದ ಮಾಜಿ ಸಿಎಂ ಸಿದ್ಧರಾಮಯ್ಯಗೆ ಅನರ್ಹ ಶಾಸಕ ಡಾ.ಸುಧಾಕರ್ ಟಾಂಗ್ ನೀಡಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ನೀವು ಕೊಡಿಸಲು ಆಗಲಿಲ್ಲ. ಹೀಗಾಗಿ ನಾವು ರಾಜೀನಾಮೆ ನೀಡಿ ಹೊರ ಬಂದವು. ಅನರ್ಹರ ಕ್ಷೇತ್ರಕ್ಕೆ ಅನುದಾನ ಕೊಟ್ಟರೇ ನಿಮಗೇನು..? ಎಂದು ಮಾಜಿ ಸಿಎಂ ಸಿದ್ಧರಾಮಯ್ಯಗೆ ಡಾ. ಸುಧಾಕರ್ ತಿರುಗೇಟು ನೀಡಿದರು.

ಚಿಕ್ಕಬಳ್ಳಾಪುರದಲ್ಲಿ ಇಂದು ಮಾತನಾಡಿದ ಅನರ್ಹ ಶಾಸಕ ಡಾ.ಸುಧಾಕರ್, ಮೈತ್ರಿ ಸರ್ಕಾರದ ವೇಳೆ ಶಾಸಕರ ಗೌರವ ಕಾಪಾಡುವಲ್ಲಿ ಸಿದ್ಧರಾಮಯ್ಯ ವಿಫಲರಾದರು. ಶಾಸಕರ ನೋವನ್ನ  ನೀವು ಅರ್ಥ ಮಾಡಿಕೊಳ್ಳಲು ಆಗಲಿಲ್ಲ.  ಮೈತ್ರಿ ಸರ್ಕಾರದಲ್ಲಿ ಅನುದಾನವನ್ನ ನೀವು ಕೊಡಿಸಲು ಆಗಲಿಲ್ಲ. ಈಗ ಈ ಬಗ್ಗೆ ಟೀಕಿಸುವುದು ಸರಿಯಲ್ಲ. ಅನರ್ಹ ಶಾಸಕರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಸಿದ್ಧರಾಮಯ್ಯ ವಿರುದ್ದ ಕಿಡಿಕಾರಿದರು.

Key words: Sudhakar – gave Tong – former CM -Siddaramaiah.