ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ: ಮಾಹಿತಿ ಹಂಚಿಕೊಳ್ಳಲು ಸುಧಾಮೂರ್ತಿ ನಿರಾಕರಣೆ

ಬೆಂಗಳೂರು,ಅಕ್ಟೋಬರ್,16,2025 (www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳದಿರಲು ಮಾಹಿತಿ ನೀಡದಿರಲು ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ನಿರ್ಧರಿಸಿದ್ದಾರೆ.

ಈ ಸಂಬಂಧ ಸ್ವಯಂ ಘೋಷಣೆ ಪತ್ರಕ್ಕೆ ಸಹಿ ಹಾಕಿರುವ ಸುಧಾಮೂರ್ತಿ ಅವರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಯುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾಹಿತಿ ನೀಡಲು ನಿರಾಕರಿಸುತ್ತದ್ದೇನೆ. ಸಮೀಕ್ಷೆಯಲ್ಲಿ ಭಾಗಿಯಾಗುವುದಿಲ್ಲ ಎಂದಿದ್ದಾರೆ.

‘ನಾವು ಹಿಂದುಳಿದ  ಯಾವ ಜಾತಿಗೂ ಸೇರಿವವರಲ್ಲ. ಅದ್ದರಿಂದ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದರಿಂದ ಸರ್ಕಾರಕ್ಕೆ ಏನೂ ಉಪಯೋಗವಿಲ್ಲ. ಹೀಗಾಗಿ ನಾವು ಇದರಲ್ಲಿ  ಪಾಲ್ಗೊಳ್ಳುವುದಿಲ್ಲ’ ಎಂದು ಘೋಷಣಾ ಪತ್ರದಲ್ಲಿ  ತಿಳಿಸಿದ್ದಾರೆ.

ಜಯನಗರದಲ್ಲಿ ಇರುವ ಸುಧಾ ಮೂರ್ತಿ ಅವರ ಮನೆಗೆ ಕಳೆದ ವಾರ ಗಣತಿದಾರರು ಭೇಟಿ ನೀಡಿದ್ದರು.

Key words: Socio-Educational Survey, Sudha Murthy, refuses ,share information