ಎಲ್ ಪಿಜಿ ಟ್ಯಾಂಕರ್ ಸ್ಪೋಟ: 18 ಮಂದಿ ಭಾರತೀಯರು ಸಾವು…

ನವದೆಹಲಿ,ಡಿ,4,2019(www.justkannada.in): ಸೂಡಾನ್ ನಲ್ಲಿ ಎಲ್ ಪಿಜಿ ಟ್ಯಾಂಕರ್ ಸ್ಪೋಟಗೊಂಡು 18 ಮಂದಿ ಭಾರತೀಯರು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

ಸೂಡಾನ್ ರಾಜಧಾನಿ ಖಾರ್ಟೌಮ್ ಹೊರವಲಯದ ಸೆರಾಮಿಕ್ಸ್  ಕಾರ್ಖಾನೆ ಸಮೀಪ  ಈ ಘಟನೆ ನಡೆದಿದೆ. ಘಟನೆಯಲ್ಲಿ 18 ಭಾರತೀಯರು ಸೇರಿ 23 ಮಂದಿ ಸಾವನ್ನಪ್ಪಿದ್ದಾರೆ. ದುರಂತದಲ್ಲಿ 130ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಲ್ಪಿಜಿ ಟ್ಯಾಂಕರ್ ಸೆರಾಮಿಕ್ ಫ್ಯಾಕ್ಟರಿ ಸಮೀಪ ಸ್ಪೋಟಿಸಿದ ಪರಿಣಾಮ ಭಾರೀ ಬೆಂಕಿ ಆವರಿಸಿದೆ. ಜನವಸತಿ ಪ್ರದೇಶಕ್ಕೂ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಸುಡಾನ್ ಜತೆ ಕೇಂದ್ರ ಸರ್ಕಾರ ಸಂಪರ್ಕದಲ್ಲಿದ್ದು ಮಾಹಿತಿ ಕಲೆ ಹಾಕಿದೆ ಎಂಬ ಸುದ್ದಿ ತಿಳಿದು ಬಂದಿದೆ.

Key words: sudan-country- LPG Tanker- Explosion- Death – 18 Indians