ರಾಜ್ಯದಲ್ಲಿಇಂತಹ ಘಟನೆಗಳು ನಡೆಯಲು ಸರ್ಕಾರದ ಮುಸ್ಲಿಂ ತುಷ್ಟೀಕರಣ ನೀತಿಯೇ ಪ್ರಮುಖ ಕಾರಣ- ಶಾಸಕ ಯತ್ನಾಳ್.

ವಿಜಯಪುರ,ಮಾರ್ಚ್,8,2024(www.justkannada.in): ರಾಜ್ಯದಲ್ಲಿ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ನಂತರ ಪ್ರಕರಣಗಳು ನಡೆಯಲು ಸರ್ಕಾರದ ಮುಸ್ಲಿಂ ತುಷ್ಟೀಕರಣ ನೀತಿಯೇ ಪ್ರಮುಖ ಕಾರಣ ಎಂದು  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬೆಂಗಳೂರಿನಲ್ಲಿ ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಲಿಂಕ್ ಬಳ್ಳಾರಿವರೆಗೆ ಮಾತ್ರವಲ್ಲ, ಇದರ ಜಾಲ ಬಹಳ ದೊಡ್ಡದಿದೆ. ಎನ್.ಐ.ಎ. ತನಿಖೆಯಲ್ಲಿ ಎಲ್ಲ ಬಯಲಾಗಲಿದೆ. ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಅಭದ್ರತೆ, ಅಸುರಕ್ಷತೆ ಸೃಷ್ಟಿಸುವ ಸಂಚಿನ ಭಾಗವಿದು. ಭಾರತ ದೇಶವನ್ನು  ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವ ಉದ್ದೇಶದಿಂದ ಇಂಥ ಕೃತ್ಯಗಳ ಮೂಲಕ ಸಂಚಿನಿಂದ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣ್ಕೆಕ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ದೇಶ ವಿರೋಧಿ ಘೋಷಣೆ ಕೂಗಿದ ವ್ಯಕ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಜೊತೆಗೆ ನಂಟು ಹೊಂದಿದ್ದಾರೆ. ಪಾಕ್ ಪರ ಘೋಷಣೆ ಕೂಗಿದ ವಿಚಾರದಲ್ಲಿ ನಾಸಿರ್ ಹುಸೇನ್ ಪಾತ್ರವೂ ಇದೆ. ಹೀಗಾಗಿ ತನಿಖೆ ಮುಗಿಯುವವರೆಗೆ ನಾಸೀರ್ ಹುಸೇನ್ ಗೆ ಪ್ರಮಾಣ ವಚನ ಭೋದಿಸಬಾರದು ಎಂದು ಮನವಿ ಮಾಡುವುದಾಗಿ ಯತ್ನಾಳ್ ತಿಳಿಸಿದರು.

Key words: such incidents-happening – state – government- Muslim –appeasement-policy-MLA Yatnal.