ಸರ್ಕಾರದ ವಿರುದ್ದ ಬೀದಿಗಿಳಿದ ವಿದ್ಯಾರ್ಥಿಗಳು: ಉಚಿತ ಬಸ್ ಪಾಸ್ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ…

ಮೈಸೂರು,ಜೂ,18,2019(www.justkannada.in): ಉಚಿತ ಬಸ್ ಪಾಸ್ ಗಾಗಿ ವಿದ್ಯಾರ್ಥಿಗಳು ಸರ್ಕಾರದ ವಿರುದ್ದ ಬೀದಿಗಿಳಿದಿದ್ದಾರೆ, ಫ್ರಿ ಬಸ್ ಪಾಸ್ ನೀಡುವಂತೆ ಒತ್ತಾಯಿಸಿ ಮೈಸೂರಿನಲ್ಲಿ  ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಉಚಿತ ಬಸ್ ಪಾಸ್ ನೀಡುವಂತೆ ಆಗ್ರಹಿಸಿ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.  ಪ್ರತಿಭಟನೆಯಲ್ಲಿ ಮಹಾರಾಣಿ  ಕಾಲೇಜಿನ ವಿದ್ಯಾರ್ಥಿನೀಯರು ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಮೇಲು ಜಾತಿಯ ವಿಷ ಬೀಜವನ್ನು ಒತ್ತಾಯವಾಗಿ ಬಿತ್ತುತ್ತಿದೆ. ರಾಜ್ಯದಲ್ಲಿ ಕೇವಲ ಪ.ಜಾ‌. ಪ.ಪಂಗಡದ ವಿದ್ಯಾರ್ಥಿಗಳು ಓದುತ್ತಿಲ್ಲ.. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಸಹ ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಶಿಕ್ಷಣ ನೀಡಬೇಕು ಎಂದು ಇದೆ.. ಆದ್ರೇ ರಾಜ್ಯದಲ್ಲಿ ಸರ್ಕಾರಗಳು ಇದನ್ನು ಧಿಕ್ಕರಿಸಿ ವಿದ್ಯಾಭ್ಯಾಸದಲ್ಲೂ ಜಾತಿಯನ್ನು ಬಿತ್ತುತ್ತಿವೆ. ಹೀಗಾಗಿ ರಾಜ್ಯ ಸರ್ಕಾರ ಎಲ್ಲರಿಗೂ ಸಮಾನ ಶಿಕ್ಷಣ ಹಾಗೂ ಉಚಿತ ಬಸ್ ಪಾಸ್ ನೀಡಬೇಕು ಎಂದು ಒತ್ತಾಯಿಸಿದರು.

Key words: Students protest-against – government-demanding- free bus- pass