ವಿದ್ಯುತ್ ತಂತಿ ತಗುಲಿ ಶಾಲೆಯಲ್ಲಿ ವಿದ್ಯಾರ್ಥಿ ಸಾವು.

ರಾಯಚೂರು,ಜುಲೈ,26,2022(www.justkannada.in): ಶಾಲೆಯಲ್ಲಿ ಕ್ರಿಕೆಟ್ ಆಡುವಾಗ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರಿನ ಕಿಲ್ಲಾರಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 8ನೇ ತರಗತಿ ವಿದ್ಯಾರ್ಥಿ ಮಲ್ಲಿಕಾರ್ಜುನ(15) ಮೃತಪಟ್ಟ ಬಾಲಕ. ಶಾಲಾ ಆವರಣದಲ್ಲಿ ಕ್ರಿಕೆಟ್ ಆಡುವಾಗ ಶಾಲೆಯ ಮಾಳಿಗೆ ಮೇಲೆ ಬಿದ್ದದ್ದ ಬಾಲ್ ತರಲು ಮಲ್ಲಿಕಾರ್ಜನ ತೆರಳಿದ್ದು ಈ ವೇಳೆ ಮಾಳಿಗೆ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿ ಮಲ್ಲಿಕಾರ್ಜುನ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.junior-powerman-dies-on-the-spot

ಈ ಕುರಿತು ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: student- died – school – electric- wire.