ಕಾಂಗ್ರೆಸ್ ನದ್ದು ಅಸ್ತಿತ್ವಕ್ಕಾಗಿ ಹೋರಾಟ. ಬಿಜೆಪಿಯದ್ದು ದೇಶದ ಅಭಿವೃದ್ಧಿಗಾಗಿ ಹೋರಾಟ-ಸಿಎಂ ಬೊಮ್ಮಾಯಿ.

ಬೆಂಗಳೂರು,ಜನವರಿ,2,2023(www.justkannada.in): ಕಾಂಗ್ರೆಸ್ ಯಾವಾಗಲೂ ಪವರ್ ಪಾಲಿಟಿಕ್ಸ್ ಮಾಡುತ್ತದೆ.   ಇಬ್ಬರ ನಡುವೆ ಬೆಂಕಿ ಹಚ್ಚೋದೇ ಕಾಂಗ್ರೆಸ್ ಪಕ್ಷದ ಕೆಲಸ . ಕಾಂಗ್ರೆಸ್ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ಆದರೆ ಬಿಜೆಪಿ ಭಾರತೀಯ ಅಭಿವೃದ್ಧಿಗಾಗಿ ಹೋರಾಡುತ್ತಿದೆ. ಬಿಜೆಪಿ ಯಾವತ್ತೂ ಅಸ್ತಿತ್ವದ ಬಗ್ಗೆ ಯೋಚಿಸಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶಿವಾಜಿ ನಗರದಲ್ಲಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಸ್ಮಾರ್ಟ್ ಸಿಟಿ ಯೋಜನೆಯಡಿ ಶಿವಾಜಿನಗರ ಅಭಿವೃದ್ದಿಯಾಗಿದೆ. ಆದರೆ ಇದನ್ನುನಾವು ಮಾಡಿದ್ದು ಎಂದು ಇಲ್ಲಿನ ಶಾಸಕರು ಹೇಳುತ್ತಾರೆ. ಕಾಂಗ್ರೆಸ್ ಕಾಲದಲ್ಲಿ ನೆನಗುದಿಗೆ ಬಿದ್ದಿದ್ದ ಕಾಮಗಾರಿಯನ್ನ ನಾವು ಮಾಡಿದ್ದೇವೆ. ಅಭಿವೃದ್ದಿ ಮಾಡದಿರುವುದಕ್ಕೆ ಜನರು ಕಾಂಗ್ರೆಸ್ ತಿರಸ್ಕರಿಸಿದ್ದಾರೆ. 2023ರ ಚುನಾವಣೆಯಲ್ಲೂ ರಾಜ್ಯದ ಜನ ಕಾಂಗ್ರೆಸ್ ತಿರಸ್ಕರಿಸಲಿದ್ದಾರೆ ಎಂದು ಹೇಳಿದರು.

ನಮಗೆ  ಅಧ್ಯಕ್ಷರು ಬೂತ್ ವಿಜಯಯಾತ್ರೆಗೆ  ಎಲ್ಲಿಂದ ಚಾಲನೆ ಕೊಡ್ತೀರಿ ಎಂದಿದ್ದರು. ಆಗ ಗೆಲವು ಕಷ್ಟ ಇರುವ ಕಡೆ ಎಂದಿದ್ದೆ.  ನಾನೇ ಶಿವಾಜಿ ನಗರ ಆಯ್ದುಕೊಂಡೆ.  ಶಿವಾಜಿ ನಗರ ಗೆದ್ದಾಗ ಜೈ ಅಂತ ಹೇಳಬೇಕು. ನಮಗೆ ಶಿವಾಜಿ ನಗರ ಗೆಲವು ಕಷ್ಟ ಅಲ್ಲ. ಈ  ಹಿಂದೆ ಗೆದ್ದಿದ್ದವು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: Struggle- existence – Congress-BJP- development – country-CM -Bommai.