ನಾನು ಕೆ.ಆರ್ ಕ್ಷೇತ್ರದ ಪ್ರಬಲ ಆಕಾಂಕ್ಷಿ- ಮುಡಾ ಮಾಜಿ ಅಧ್ಯಕ್ಷ ಎಚ್.ವಿ ರಾಜೀವ್

ಮೈಸೂರು,ಫೆಬ್ರವರಿ,9,2023(www.justkannada.in): ಕೆ.ಆರ್ ಕ್ಷೇತ್ರದ ಹಾಲಿ ಶಾಸಕ ಎ.ಎಸ್ ರಾಮದಾಸ್ ಗೆ ಪೈಪೋಟಿ ನೀಡಲು ಮುಡಾ ಮಾಜಿ ಅಧ್ಯಕ್ಷ ಎಚ್.ವಿ ರಾಜೀವ್ ಸಜ್ಜಾಗಿದ್ದು, ನಾನು ಸಹ ಕೆ.ಆರ್ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಚ್.ವಿ ರಾಜೀವ್, ಕ್ಷೇತ್ರದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಕೆಲಸ ಮಾಡುತ್ತ ಬಂದಿದ್ದೇನೆ. ನಮ್ಮೂರಿನಲ್ಲಿ ಬೂತ್ ಏಜೆಂಟ್ ಆಗಿ ಕೆಲಸ ಮಾಡಿಕೊಂಡು ಬಂದವನು ನಾನು. ನನ್ನ ನಾಯಕ ಯಡಿಯೂರಪ್ಪ ಅವರ ಜೊತೆ ಹೆಜ್ಜೆಗೆ ಹೆಜ್ಜೆ ಇಟ್ಟು ಬಂದೆ. ಕಳೆದ ಬಾರಿ ಅವರು ಕೆಜೆಪಿ ಪಕ್ಷ ಕಟ್ಟಿದ್ದರು. ಅವರ ಜೊತೆ ಹೋಗಿದ್ದೆ ಮತ್ತೆ ಬಿಜೆಪಿ ವಾಪಸ್  ಬಂದ್ರು.  ನಾನೂ ಕೂಡ ಬಿಜೆಪಿಗೆ ಬಂದೆ. ಕಳೆದ ಬಾರಿ ನಾನು ಭಾರಿ ಪೈಪೋಟಿ ನೀಡಿದ್ದೆ.

ಕ್ಷೇತ್ರದ ಜನರಿಂದ ನನ್ನ ಸ್ಪರ್ಧೆಗೆ ಒತ್ತಡವಿದೆ. ಈಗ ನಾನು ಕೂಡ  ಕೆ.ಆರ್ ಕ್ಷೇತ್ರದ ಆಕಾಂಕ್ಷಿ ಆಗಿರುವುದು ಸತ್ಯ. ಆ ಮೂಲಕ ಪಕ್ಷ ಸಂಘಟನೆ ಸಾಮಾಜಿಕ ಕೆಲಸ ಕಾರ್ಯಗಳು, ಜನಸಾಮಾನ್ಯರ ಜೊತೆ ನಿರಂತರ ಸಂಪರ್ಕ ಸಮಾಜಸೇವಾ ಕೆಲಸಗಳ ಮಾಡುತ್ತ ಬಂದಿದ್ದೇನೆ. ಈ ಬಾರಿ ಕೆ.ಆರ್ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದು ಅದರ  ಪ್ರಯತ್ನ ಕೂಡ ನಡೆಯುತ್ತಿದೆ ಎಂದರು.

Key words: strong -aspirant – KR Constituency- HV Rajiv