ನಾಳೆ ಕಾರ್ಮಿಕ ಸಂಘಟನೆಗಳಿಂದ ಮುಷ್ಕರ: ರಾಜ್ಯದ ಹಲವೆಡೆ ವಿವಿಧ ಸಂಘಟನೆಗಳಿಂದ ಬೆಂಬಲ…

ಮಂಡ್ಯ,ಜ,7,2020(www.justkannada.in): ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಕೇಂದ್ರದ ಕಾರ್ಮಿಕ ನೀತಿಯನ್ನ ವಿರೋಧಿಸಿ ನಾಳೆ ಕಾರ್ಮಿಕ ಸಂಘಟನೆಗಳು ದೇಶಾದಾದ್ಯಂತೆ ಮುಷ್ಕರ ಹೂಡಿದ್ದು ರಾಜ್ಯದ ಹಲವು ಜಿಲ್ಲೆಗಳಲ್ಲಿ  ವಿವಿಧ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿವೆ.

ನಾಳಿನ ಮುಷ್ಕರಕ್ಕೆ ಮಂಡ್ಯದಲ್ಲಿ ಎಐಟಿಯುಸಿ, ಎಸ್ಟಿಪಿ, ಸಿಪಿಎಂ,  ಕೆಎಸ್ ಆರ್ ಟಿಸಿ ಗಾರ್ಮೆಂಟ್ಸ್ ಸೇರಿ ಹಲವು ಸಂಘಟನೆಗಳು ಬೆಂಬಲ ನೀಡಿವೆ. ತುಮಕೂರು, ರಾಯಚೂರಿನಲ್ಲೂ 10ಕ್ಕು ಹೆಚ್ಚು ಸಂಘಟನೆಗಳು ನಾಳಿನ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ.

ಇನ್ನು  ನಾಳೆ  ಹಾವೇರಿಯಲ್ಲೂ ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ನಗರದ ಹುಕ್ಕೇರಿ ಮಠದಿಂದ ಮೈಲಾರ ಮಹದೇವಪ್ಪ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲಾಗುತ್ತದೆ. ವಿವಿಧ ಸಂಘಟನೆಗಳು ಧರಣಿ ನಡೆಸಲಿವೆ. ಇನ್ನು ಚಿಕ್ಕಮಗಳೂರಿನಲ್ಲೂ ಬೆಂಬಲ ವ್ಯಕ್ತವಾಗಿದೆ.

Key words: Strike – labor unions- tomorrow-Support – various organizations