ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳಿಂದ ದಾಳಿ.

ಮೈಸೂರು,ಡಿಸೆಂಬರ್,13,2021(www.justkannada.in): ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆಯಲ್ಲಿ ನಡೆದಿದೆ.

ಹೆಚ್ ಡಿ ಕೋಟೆ ಪಟ್ಟಣದ ಮುಸ್ಲಿಂ ಬ್ಲಾಕ್‌ ನ ಮಹಮದ್ ಅಬಾನ್ 7 ಗಾಯಗೊಂಡ ಬಾಲಕ. ಮಹಮದ್ ಅಬಾನ್ ಮನೆಯ ಹೊರಗೆ ಆಟವಾಡುವಾಗ ನಾಯಿಗಳು ದಾಳಿ ಮಾಡಿವೆ.  ಘಟನೆಯಲ್ಲಿ ಅಬಾನ್ ಮಂಡಿ‌ ತೊಡೆ ಕೈಗೆ ಗಾಯಗಳಾಗಿದ್ದು, ಬಾಲಕನಿಗೆ ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದಿನೇ ದಿನೇ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಪುರಸಭೆಗೆ ದೂರು‌ ನೀಡಿದರೂ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Key words: Street-dog- attacked – boy- child