ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಕೋಳಿಗಳೆಲ್ಲ ಬ್ಯಾಕಿಂದ ಮೊಟ್ಟೆ ಇಟ್ರೆ ಇಲ್ಲೊಂದು ಮಾತ್ರ ಫ್ರೆಂಟಿಂದಾನೆ ಇಡುತ್ತೆ…..!

ನಾಗಮಂಗಲ,ಜು,26,2019(www.justkannada.in): ಜನರು ಅಚ್ಚರಿ ಪಡುವಂತಹ ಘಟನೆಗಳು ಆಗ್ಗಾಗ್ಗೆ ನಡೆಯುತ್ತಲೇ ಇರುತ್ತವೆ. ಅಂತೆಯೇ ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲೊಂದು ವಿಚಿತ್ರ ಘಟನೆ ನಡೆದಿದ್ದು ಎಲ್ಲರನ್ನೂ ನಿಬ್ಬೆರಗಾಗಿಸಿದೆ.

ಹೌದು ನಾಗಮಂಗಲ ಪಟ್ಟಣದಲ್ಲಿ ಕೋಳಿಯೊಂದು ಕುತ್ತಿಗೆ ಭಾಗದಲ್ಲಿ ಕೊಟ್ಟೆಯಿಟ್ಟು ಆಚ್ಚರಿ ಮೂಡಿಸಿದೆ.  ನಾಗಮಂಗಲ ಪಟ್ಟಣದ ಹೇಮಾವತಿ ಬಡಾವಣೆಯ ಕಾಲಜ್ಞಾನಿ ಪುಸ್ತಕ ಬರೆಯುವುದರಲ್ಲಿ ಹೆಸರುವಾಸಿಯಾಗಿರುವ ಬರಹಗಾರ ಶಿವರಾಮೇಗೌಡ ರವರ ಮನೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ.

ಸುಮಾರು ಎರಡು ವರ್ಷದಿಂದ ತಮ್ಮ ಮನೇಲಿ ಸಾಕಿಕೊಂಡಿದ್ದ ಕೋಳಿ ಹಲವು ಬಾರಿ ಮೊಟ್ಟೆಗಳನ್ನು ಇಟ್ಟು ಮರಿಗಳನ್ನು ಮಾಡಿತ್ತು. ಆದರೆ ಇದೀಗ ಈ ಕೋಳಿ ಕುತ್ತಿಗೆ ಭಾಗದಿಂದ ಮೊಟ್ಟೆಗಳನ್ನಿಡುತ್ತಿದ್ದು ಶಿವರಾಮೇಗೌಡ ರವರ  ಕುಟುಂಬದವರೇ ಆಶ್ಚರ್ಯಪಟ್ಟು ಅದನ್ನ  ವಿಡಿಯೋ ಮಾಡಿದ್ದಾರೆ. ಹಲವು ವರ್ಷಗಳಿಂದ ತಮ್ಮ ಪಾಡಿಗೆ ತಾವು ಜಗತ್ತಿಗೆ ಸಂದೇಶ ಹೇಳುವ 15ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ವ್ಯವಸಾಯ ಮಾಡಿಕೊಂಡಿದ್ದ ಶಿವರಾಮೇಗೌಡರ ಮನೆಯಲ್ಲಿ ಇಂತಹ ಘಟನೆ ನಡೆದಿದೆ.

Key words: strange- incident – Nagamangala-hen-egg -surprise