ಮೈಸೂರು : ಕಾಂಗ್ರೆಸ್ ನಿಂದ  “ಸ್ಟಾಪ್ ವೋಟ್ ಚೂರಿ” ಅಭಿಯಾನ

ಮೈಸೂರು,ಆಗಸ್ಟ್,19,2025 (www.justkannada.in):  ಮತಕಳ್ಳತನ ಖಂಡಿಸಿ ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ  “ಸ್ಟಾಪ್ ವೋಟ್ ಚೂರಿ” ಅಭಿಯಾನ ನಡೆಸಲಾಯಿತು.

ಮೈಸೂರಿನ ಸಬರ್ಬನ್ ಬಸ್ ನಿಲ್ದಾಣದಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ನೇತೃತ್ವದಲ್ಲಿ  ಸರ್ಕಾರಿ ಬಸ್ಸುಗಳಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ  ಸ್ಟಾಪ್ ವೋಟ್ ಚೂರಿ ಅಭಿಯಾನವನ್ನ ನಡೆಸಿದರು. ಅಭಿಯಾನದಲ್ಲಿ  ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಸೇರಿ ಅನೇಕ ಮುಖಂಡರು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಬಿಜೆಪಿ ಸರ್ಕಾರ 18 ರಾಜ್ಯಗಲ್ಲಿ ಸರ್ಕಾರ ನಡೆಸುತ್ತಿದೆ. 2014, 2019 2024  ಲೋಕಸಭೆ ಚುನಾವಣೆಯಲ್ಲಿ ಮತಕಳ್ಳತನ ಮಾಡಿ ಬಿಜೆಪಿ ಗೆದ್ದಿದ್ದಾರೆ. ರಾಹುಲ್ ಗಾಂಧಿ ಸಾಕ್ಷಿ ಸಮೇತ ದೂರು ನೀಡಿದರೇ ಮುಖ್ಯ  ಚುನಾವಣಾ ಆಯುಕ್ತರರುಅಫಿಡವಿಟ್ ನೀಡಿ ಎಂದು ತಾಕೀತು ಮಾಡುತ್ತಾರೆ  ಮುಖ್ಯ ಚುನಾವಣಾ ಆಯುಕ್ತರು  ಬಿಜೆಪಿ ಏಜೆಂಟ್ ಆಗಿ ವರ್ತಿಸುತ್ತಿದ್ದಾರೆ. ವಿಪಕ್ಷಗಳಿಗೆ ಧಮ್ಕಿ ಹಾಕುವ ಕೆಲಸ ಮಾಡುತ್ತಿದ್ದಾರೆ . ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನ ಸಸ್ಪೆಂಡ್ ಮಾಡಬೇಕು  ಎಂದು ಆಗ್ರಹಿಸಿದರು.

ಮೈಸೂರಿನಲ್ಲೂ ಹಾಲಿ ಸಂಸದರೂ ಮತಗಳ್ಳತನದಿಂದಲೇ ಗೆದ್ದಿದ್ದಾರೆ. ಚಾಮರಾಜ, ಕೃಷ್ಣರಾಜ ಮಡಿಕೇರಿ ವಿರಾಜಪೇಟೆ  ವಿಧಾನಸಭಾ ಕ್ಷೇತ್ರಗಳ್ಲಲಿ ಮತಗಳ್ಳತನ ಆಗಿದೆ ಎಂದು ಎಂ.ಲಕ್ಷ್ಮಣ್ ಆರೋಪಿಸಿದರು.

Key words: Mysore,  stop vote chori,  campaign, Congress