ಕುಡಿಯುವ ನೀರಿನ ಟ್ಯಾಂಕ್ ಗೆ ಕ್ರಿಮಿನಾಶಕ ಬೆರೆಸಿದ ದುಷ್ಕರ್ಮಿಗಳು…

ಮೈಸೂರು,ಏಪ್ರಿಲ್,20,2021(www.justkannada.in):  ದುಷ್ಕರ್ಮಿಗಳು ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಗೆ ಕ್ರಿಮಿನಾಶಕ ಬೆರೆಸಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ.jk

ನಂಜನಗೂಡು ತಾಲ್ಲೂಕಿನ ಕುರಹಟ್ಟಿ ಗ್ರಾಮದಲ್ಲಿ ಈ ಘಟನೆ  ನಡೆದಿದ್ದು, ಟ್ಯಾಂಕ್ ನಿಂದ ನಲ್ಲಿಗಳಿಗೆ ನೀರು ಬಿಟ್ಟಾಗ ವಾಸನೆಯಿಂದ ಘಟನೆ ಬೆಳಕಿಗೆ  ಬಂದಿದೆ. ಗ್ರಾಮಸ್ಥರು ಅದೃಷ್ಟವಶಾತ್ ವಾಸನೆಯಿಂದ ನೀರನ್ನ ಬಳಕೆ  ಮಾಡದೇ ಇರುವುದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

ಈ ಮಧ್ಯೆ ನೀರು ಸೇವಿಸಿರುವ ಗ್ರಾಮದ ಸಾಕುಪ್ರಾಣಿಗಳು ಅಸ್ವಸ್ಥವಾಗಿದ್ದು, ಕ್ರಿಮಿನಾಶಕ ಬೆರಸಿದ ಪರಿಣಾಮ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ವಿಚಾರ ತಿಳಿದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್  ಮತ್ತು ನಂಜನಗೂಡಿನ ಡಿವೈಎಸ್ಪಿ ಗೋವಿಂದರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ  ನಡೆಸಿದ್ದಾರೆ.Sterilization-mix- drinking- water- tank-mysore

ಟ್ಯಾಂಕ್ ನೀರಿಗೆ ಭತ್ತದ ಗದ್ದೆಗೆ ಸಿಂಪಡಿಸುವ ಕ್ರಿಮಿನಾಶಕ ಔಷಧಿ ಬೆರೆಸಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಟ್ಯಾಂಕರ್ ಮೂಲಕ ಗ್ರಾಮದಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಗ್ರಾಮವನ್ನೇ ಸ್ಮಶಾನ ಮಾಡಲು ಹೊರಟಿದ್ದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

Key words: Sterilization-mix- drinking- water- tank-mysore